ಕುತುಬ್ ಮಿನಾರ್‌ನಲ್ಲಿ ಯೋಗ ದಿನ ಆಚರಣೆ
ನವದೆಹಲಿ, 19 ಜೂನ್ (ಹಿ.ಸ.): ಆ್ಯಂಕರ್: ಅಂತರರಾಷ್ಟ್ರೀಯ ಯೋಗ ದಿನ 2025 ನಿಮಿತ್ತ, ಪ್ರವಾಸೋದ್ಯಮ ಸಚಿವಾಲಯದ ಆಶ್ರಯದಲ್ಲಿ ಭಾರತ ಪ್ರವಾಸೋದ್ಯಮವು ಕುತುಬ್ ಮಿನಾರ್ ಸನ್ ಡಯಲ್ ಲಾನ್‌ನಲ್ಲಿ ಸಾಮೂಹಿಕ ಯೋಗ ಅಧಿವೇಶನ ಆಯೋಜಿಸಲಿದೆ. ಈ ವರ್ಷದ ಥೀಮ್ ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ, ಯೋಗ ಮತ್ತು ಪರಿಸ
ಕುತುಬ್ ಮಿನಾರ್‌ನಲ್ಲಿ ಯೋಗ ದಿನ ಆಚರಣೆ


ನವದೆಹಲಿ, 19 ಜೂನ್ (ಹಿ.ಸ.):

ಆ್ಯಂಕರ್:

ಅಂತರರಾಷ್ಟ್ರೀಯ ಯೋಗ ದಿನ 2025 ನಿಮಿತ್ತ, ಪ್ರವಾಸೋದ್ಯಮ ಸಚಿವಾಲಯದ ಆಶ್ರಯದಲ್ಲಿ ಭಾರತ ಪ್ರವಾಸೋದ್ಯಮವು ಕುತುಬ್ ಮಿನಾರ್ ಸನ್ ಡಯಲ್ ಲಾನ್‌ನಲ್ಲಿ ಸಾಮೂಹಿಕ ಯೋಗ ಅಧಿವೇಶನ ಆಯೋಜಿಸಲಿದೆ.

ಈ ವರ್ಷದ ಥೀಮ್ ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ, ಯೋಗ ಮತ್ತು ಪರಿಸರ ಸಮತೋಲನದ ನಂಟನ್ನು ಪ್ರಚುರಪಡಿಸುವುದಾಗಿದೆ.

ಕಾರ್ಯಕ್ರಮವನ್ನು ಯೋಗಗುರು ಗೋಪಾಲ್ ರಿಷಿ ನೇತೃತ್ವದ ತಂಡ ನಡೆಸಿಕೊಡಲಿದೆ.

ಶಾಸಕ ಗಜೇಂದ್ರ ಸಿಂಗ್ ಯಾದವ್, ಡಿಎಂಕೆ ಲಕ್ಷ್ಯ ಸಿಂಘಾಲ್, ಶ್ರೀಲಂಕಾ ಮತ್ತು ಚೀನಾ ಹೈಕಮಿಷನರ್‌ಗಳ ಪ್ರತಿನಿಧಿಗಳು, ಮಲೇಷ್ಯಾದ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.

ಪ್ರವಾಸೋದ್ಯಮ ಕ್ಷೇತ್ರದ ವಿವಿಧ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು, ಸ್ಥಳೀಯರು ಮತ್ತು ಅಧಿಕಾರಿಗಳು ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande