ಹಿರೇಬೆಣಕಲ್ : ಯುನೆಸ್ಕೋ ಪಟ್ಟಿಗೆ ಸೇರಿಸಲು ಪ್ರಯತ್ನ
ಗಂಗಾವತಿ, 17 ಜೂನ್ (ಹಿ.ಸ.) : ಆ್ಯಂಕರ್ : ಹಿರೇಬೆಣಕಲ್ ಮೋರೆರ ಬೆಟ್ಟದಲ್ಲಿ ಅಧ್ಯಯನ ಮಾಡಿ, ಜಾಗತಿಕ ಪಾರಂಪರಿಕ ಸ್ಥಳವನ್ನಾಗಿ ಸಂರಕ್ಷಿಸಿ ಯುನೆಸ್ಕೋ ಶಾಶ್ವತ ಪಟ್ಟಿಯಲ್ಲಿ ಸೇರಿಸಲು ಯತ್ನಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ತಿಳಿಸಿದ್ದಾರೆ. ಗಂಗಾವತಿ ತಾಲೂಕಿನ ಹಿರೇಬೆ
ಹಿರೇಬೆಣಕಲ್ : ಯುನೆಸ್ಕೋ ಪಟ್ಟಿಗೆ ಸೇರಿಸಲು ಪ್ರಯತ್ನ


ಗಂಗಾವತಿ, 17 ಜೂನ್ (ಹಿ.ಸ.) :

ಆ್ಯಂಕರ್ : ಹಿರೇಬೆಣಕಲ್ ಮೋರೆರ ಬೆಟ್ಟದಲ್ಲಿ ಅಧ್ಯಯನ ಮಾಡಿ, ಜಾಗತಿಕ ಪಾರಂಪರಿಕ ಸ್ಥಳವನ್ನಾಗಿ ಸಂರಕ್ಷಿಸಿ ಯುನೆಸ್ಕೋ ಶಾಶ್ವತ ಪಟ್ಟಿಯಲ್ಲಿ ಸೇರಿಸಲು ಯತ್ನಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ತಿಳಿಸಿದ್ದಾರೆ.

ಗಂಗಾವತಿ ತಾಲೂಕಿನ ಹಿರೇಬೆಣಕಲ್ ಮೋರೆರ ಬೆಟ್ಟದ ವೀಕ್ಷಣೆಯ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರೇಬೆಣಕಲ್ ಬಗ್ಗೆ ಜಪಾನ್, ಜರ್ಮನ್ ಸೇರಿ ವಿದೇಶಿಗರಿಗೆ ಮಾಹಿತಿ ಗೊತ್ತಾದರೆ ಸಾಲುಗಟ್ಟುತ್ತಾರೆ. ಈ ಸ್ಥಳವನ್ನು ಜಗತ್ತಿನ ಪ್ರವಾಸಿಗರ ಆಕರ್ಷಣೀಯ ಸ್ಥಳ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಹಿರೇಬೆಣಕಲ್ ಮೋರೆರ ಬೆಟ್ಟಗಳಲ್ಲಿನ ಗವಿ ವರ್ಣಚಿತ್ರಗಳ ಭಾವಚಿತ್ರಗಳನ್ನು ಸೆರೆಹಿಡಿಯಬೇಕು. ಈ ಚಿತ್ರಗಳನ್ನು ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ವೆಂಕಟಪ್ಪ ಗ್ಯಾಲರಿಯಲ್ಲಿ ವಸ್ತು ಪ್ರದರ್ಶನಕ್ಕೆ ಇಡಬೇಕು. ವರ್ಣಚಿತ್ರಕ್ಕೆ ಬಳಸಿದ ಬಣ್ಣವನ್ನು ಅಧ್ಯಯನ ಮಾಡಬೇಕು. ಈ ಕುರಿತು ಚರ್ಚೆ ಆಗಬೇಕು ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande