ಇರಾನ್-ಇಸ್ರೇಲ್ ನಡುವೆ ತೀವ್ರ ವಾಯು ಸಂಘರ್ಷ
ಟೆಲ್ಅವೀವ್, 14 ಜೂನ್ (ಹಿ.ಸ.) : ಆ್ಯಂಕರ್ : ಇಸ್ರೇಲ್‌ನ ಮಿಲಿಟರಿ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಭಾರೀ ಕ್ಷಿಪಣಿದಾಳಿ ನಡೆಸಿದ್ದು, ಟೆಹ್ರಾನ್ ಮತ್ತು ಟೆಲ್ ಅವೀವ್‌ನಲ್ಲಿನ ಸ್ಫೋಟಗಳಿಂದ ಪರಿಸ್ಥಿತಿ ತೀವ್ರಗೊಂಡಿದೆ. ಇಸ್ರೇಲ್‌ನ ಉತ್ತರ ಭಾಗದಲ್ಲಿ ಸೈರನ್‌ಗಳು ಮೊಳಗಿದ್ದು, ಜೆರುಸಲೆಮ್‌ನಲ್ಲಿ ಭಾರ
Iran


ಟೆಲ್ಅವೀವ್, 14 ಜೂನ್ (ಹಿ.ಸ.) :

ಆ್ಯಂಕರ್ : ಇಸ್ರೇಲ್‌ನ ಮಿಲಿಟರಿ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಭಾರೀ ಕ್ಷಿಪಣಿದಾಳಿ ನಡೆಸಿದ್ದು, ಟೆಹ್ರಾನ್ ಮತ್ತು ಟೆಲ್ ಅವೀವ್‌ನಲ್ಲಿನ ಸ್ಫೋಟಗಳಿಂದ ಪರಿಸ್ಥಿತಿ ತೀವ್ರಗೊಂಡಿದೆ.

ಇಸ್ರೇಲ್‌ನ ಉತ್ತರ ಭಾಗದಲ್ಲಿ ಸೈರನ್‌ಗಳು ಮೊಳಗಿದ್ದು, ಜೆರುಸಲೆಮ್‌ನಲ್ಲಿ ಭಾರಿ ನಾಶ ಉಂಟಾಗಿದೆ.

ಇಸ್ರೇಲ್‌ಗೆ ಇಂದಿಗೆ 150 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇರಾನ್ ಹಾರಿಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿ 40 ಜನ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್, ಇರಾನ್‌ನ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿದೆ.

ಈ ಸಂಘರ್ಷದ ಕುರಿತು ಚೀನಾ ಕಳವಳ ವ್ಯಕ್ತಪಡಿಸಿದ್ದು, ಉಲ್ಬಣ ಯಾವುದೇ ದೇಶಕ್ಕೂ ಲಾಭಕರವಲ್ಲ ಎಂದು ತಿಳಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚಿದ್ದು, ಪರಿಸ್ಥಿತಿ ಯುದ್ಧದ ದಿಕ್ಕಿಗೆ ಸಾಗುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande