ಆಟೊ ರಿಕ್ಷಾಗಳಿಂದ ಸಂಚಾರಿ ನಿಯಮಗಳ ಉಲ್ಲಂಘನೆ
ಆಟೊ ರಿಕ್ಷಾಗಳಿಂದ ಸಂಚಾರಿ ನಿಯಮಗಳ ಉಲ್ಲಂಘನೆ
ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಆಟೋ ರಿಕ್ಷಾದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಆಟೋ ರಿಕ್ಷಾ ತಡೆದು ಕೋಲಾರ ಸಂಚಾರಿ ಸಬ್‌ಇನ್ಸ್ಪೆಕ್ಟರ್ ಭಾರತಿ ಚಾಲಕನಿಗೆ ಎಚ್ಚರಿಕೆ ನೀಡಿದರು.


ಕೋಲಾರ, ೧೩ ಜೂನ್ (ಹಿ.ಸ) :

ಆ್ಯಂಕರ್ : ಇತ್ತೀಚಿನ ದಿನಗಳಲ್ಲಿ ಕೋಲಾರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಪ್ರಮುಖವಾಗಿ ಶಾಲಾ ಕಾಲೇಜು ಬಸ್ ಹಾಗೂ ಆಟೋಗಳಲ್ಲಿ ಸಾಮರ್ಥ್ಯಕ್ಕೂ ಹೆಚ್ಚು ಮಕ್ಕಳನ್ನು ತುಂಬಿಕೊAಡು ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದ ಆಟೋ ರಿಕ್ಷಾಗಳನ್ನು ತಡೆದು ತಪಾಸಣೆ ನಡೆಸಿ ದಂಡ ವಿಧಿಸುವ ಮೂಲಕ ಸಂಚಾರಿ ಪೋಲೀಸರು ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಕೋಲಾರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಂಚಾರಿ ಪೋಲೀಸರು ಸಂಚಾರಿ ನಿಮಯಗಳನ್ನು ಪಾಲಿಸುವಂತೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಎಚ್ಚರಿಕೆ ನೀಡಿದರೂ ಅಗತ್ಯಕ್ಕೂ ಮೀರಿ ಶಾಲಾ ಮಕ್ಕಳನ್ನು ತುಂಬಿಕೊAಡು ಸಂಚರಿಸುತ್ತಿದ್ದ ಆಟೋಗಳನ್ನು ತಡೆದು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ಕೋಲಾರ ಸಂಚಾರಿ ಪೋಲೀಸ್ ಠಾಣೆಯ ಪಿಎಸ್‌ಐ ಭಾರತಿ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದ ಸಂಚಾರಿ ಪೋಲೀಸರು ಸಾಮರ್ಥ್ಯಕ್ಕೂ ಮೀರಿ ಸಂಚರಿಸುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿ ಎಚ್ಚರಿಕೆ ನೀಡಿದ್ದಾರೆ.

ಕೋಲಾರ ನಗರದ ಟೇಕಲ್ ಜಿಗ್‌ಜಾಗ್ ಬಳಿ ಸಾರ್ವಜನಿಕರಿಂದ ಬಂದ ದೂರಿನ ಅನ್ವಯ ಎಚ್ಚೆತ್ತುಕೊಂಡ ಸಂಚಾರಿ ಪೋಲೀಸರು ಶಾಲಾ ಮಕ್ಕಳನ್ನು ಅಗತ್ಯಕ್ಕೂ ಮೀರಿ ಒಂದು ಆಟೋದಲ್ಲಿ ಏಳರಿಂದ ಹತ್ತು ಮಕ್ಕಳನ್ನು ತುಂಬಿಕೊAಡು ಸಂಚರಿಸುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ. ಕಾರ್ಯಾಚರಣೆ ನಿರಂತರವಾಗಿ ಮುಂದುವರೆಯಲಿದ್ದು ಯಾರೇ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಸಂಚರಿಸಿದರು ಅಂತಹವರÀ ವಿರುದ್ದ ಕ್ರಮ ಕೈ ಗೊಳ್ಳುವುದಾಗಿ ಸಂಚಾರಿ ಪೋಲೀಸ್ ಠಾಣೆಯ ಪಿಎಸ್‌ಐ ಭಾರತಿ ಎಚ್ಚರಿಕೆ ನೀಡಿದ್ದಾರೆ.

ಶಾಲಾ ಮಕ್ಕಳ ಹಿತ ದೃಷ್ಟಿಯಿಂದ ಕಾರ್ಯಾಚರಣೆಗೆ ದುಮುಕಿರುವ ಸಂಚಾರಿ ಪೋಲೀಸರು ಶಾಲಾ ಆಡಳಿತ ಮಂಡಳಿಯೊಟ್ಟಿಗೆ ಸಭೆನಡೆಸಿ ಶಾಲಾ ಕಾಲೇಜು ವಾಹನಗಳು ಹಾಗು ವಿಶೇಷವಾಗಿ ಆಟೋಗಳಲ್ಲಿ ಅಗತ್ಯಕ್ಕು ಮೀರಿ ಹೆಚ್ಚನ ಮಕ್ಕಳನ್ನು ತುಂಬಿಸಿಕೊAಡು ಸಂಚರಿಸದAತೆ ಜಾಗೃತಿ ಮೂಡಿಸುವ ಸಲುವಾಗಿ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಪ್ರಮುಖವಾಗಿ ಪೋಷಕರು ಸಹ ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

ಇನ್ನು ಮುಂದೆ ಆಟೋದಲ್ಲಿ ಸಾಮರ್ಧ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಬಾರದು ಒಂದು ವೇಳೆ ಈ ನಿಯಮಗಳನ್ನು ಮೀರಿದರೆ ಸೂಕ್ತ ಕಾನುನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೆ ಸಂಚಾರಿ ನಿಯಮಗಳನ್ನು ಆಟೊ ಚಾಲಕರು ಪಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.

ಚಿತ್ರ : ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಆಟೋ ರಿಕ್ಷಾದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಆಟೋ ರಿಕ್ಷಾ ತಡೆದು ಕೋಲಾರ ಸಂಚಾರಿ ಸಬ್‌ಇನ್ಸ್ಪೆಕ್ಟರ್ ಭಾರತಿ ಚಾಲಕನಿಗೆ ಎಚ್ಚರಿಕೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande