ನವದೆಹಲಿ, 09 ಮೇ (ಹಿ.ಸ.) :
ಆ್ಯಂಕರ್ : ಅಮೃತಸರದಿಂದ ಭುಜ್‌ವರೆಗೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆ 'ಸುದರ್ಶನ ಚಕ್ರ' ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ವಿಫಲಗೊಳಿಸಿದೆ. ಆಪರೇಷನ್ 'ಸಿಂಧೂರ್'ನಲ್ಲಿ ಭಾರತೀಯ ಸೇನೆಯು ರಷ್ಯಾ ಮೂಲದ ಎಸ್-400 ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ್ದು, ದೇಶದ ಹಲವು ವಾಯುನೆಲೆಗಳ ಮೇಲೆ ನಡೆದ ದಾಳಿಯನ್ನು ಆಕಾಶದಲ್ಲೇ ತಡೆದಿದೆ.
ಜಮ್ಮು, ಪಠಾಣ್‌ಕೋಟ್, ಉಧಂಪುರ ಸೇರಿ ಹಲವು ಸೇನಾ ನೆಲೆಗಳ ಮೇಲೆ ಪಾಕಿಸ್ತಾನದಿಂದ ಆಗಮಿಸಿದ 8 ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ. ಉಧಂಪುರದಲ್ಲಿ ಒಂದು ಡ್ರೋನ್ ಕೂಡಾ ಉಡಾವಣೆಯಲ್ಲೇ ಧ್ವಂಸವಾಗಿದೆ. ಈ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ಯಾವುದೇ ಹಾನಿ ಉಂಟಾಗಿಲ್ಲ
ಎಸ್-400 ವ್ಯವಸ್ಥೆಯು 400 ಕಿ.ಮೀ ವ್ಯಾಪ್ತಿಯಲ್ಲಿರುವ ಗುರಿಗಳನ್ನು ನಿಖರವಾಗಿ ಹೊಡೆಯಬಲ್ಲದು. ಭಾರತದಲ್ಲಿ ಈಗಾಗಲೇ ಮೂರು ಸ್ಕ್ವಾಡ್ರನ್‌ಗಳನ್ನು ನಿಯೋಜಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa