ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸಾಗಾಣೆದಾರರ ಬಂಧನ
ಚಂಡೀಗಡ, 09 ಮೇ (ಹಿ.ಸ.) : ಆ್ಯಂಕರ್ : ಪಂಜಾಬ್ ಗುಪ್ತಚರ ದಳ ನೇತೃತ್ವದ ಕಾರ್ಯಾಚರಣೆಯಲ್ಲಿ, ತರಣ್ ತರಣ್ ಜಿಲ್ಲೆಯ ಪೊಲೀಸರು ಅಂತಾರಾಷ್ಟ್ರೀಯ ಮಾದಕವಸ್ತು-ಭಯೋತ್ಪಾದಕ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಾರೆ. ಇಬ್ಬರು ಕಳ್ಳಸಾಗಣೆ ದಾರರಾದ ಲವ್‌ಪ್ರೀತ್ ಸಿಂಗ್ ಮತ್ತು ಜಗ್ರೂಪ್ ಸಿಂಗ್ ಅವರನ್ನು 7 ಅತ್ಯ
Raid


ಚಂಡೀಗಡ, 09 ಮೇ (ಹಿ.ಸ.) :

ಆ್ಯಂಕರ್ : ಪಂಜಾಬ್ ಗುಪ್ತಚರ ದಳ ನೇತೃತ್ವದ ಕಾರ್ಯಾಚರಣೆಯಲ್ಲಿ, ತರಣ್ ತರಣ್ ಜಿಲ್ಲೆಯ ಪೊಲೀಸರು ಅಂತಾರಾಷ್ಟ್ರೀಯ ಮಾದಕವಸ್ತು-ಭಯೋತ್ಪಾದಕ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಾರೆ.

ಇಬ್ಬರು ಕಳ್ಳಸಾಗಣೆ ದಾರರಾದ ಲವ್‌ಪ್ರೀತ್ ಸಿಂಗ್ ಮತ್ತು ಜಗ್ರೂಪ್ ಸಿಂಗ್ ಅವರನ್ನು 7 ಅತ್ಯಾಧುನಿಕ ಪಿಸ್ತೂಲ್‌ಗಳ ಜೊತೆಗೆ ಜೀವಂತ ಕಾರ್ಟ್ರಿಡ್ಜ್‌ಗಳು, 5 ಕೆಜಿ ಹೆರಾಯಿನ್, ₹7.20 ಲಕ್ಷ ಹಣ ಮತ್ತು ಹಣ ಎಣಿಕೆ ಯಂತ್ರದೊಂದಿಗೆ ಬಂಧಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಪಾಕಿಸ್ತಾನ ಮೂಲದ ಕಳ್ಳಸಾಗಣೆದಾರರು ಮತ್ತು ವಿದೇಶಿ ಹ್ಯಾಂಡ್ಲರ್‌ಗಳೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.

ಶಹರ ತರಣ್ ತರಣ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಪಂಜಾಬ್ ಪೋಲಿಸ್ ಮಹಾ ನಿರ್ದೇಶಕರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande