ಟರ್ಕಿ ಸಹಾಯಕ್ಕೆ ಪಾಕಿಸ್ತಾನ ಮನವಿ
ಇಸ್ಲಾಮಾಬಾದ್, 04 ಮೇ (ಹಿ.ಸ.) : ಆ್ಯಂಕರ್ : ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತದ ಪ್ರತಿಕ್ರಿಯೆಯಿಂದ ಆತಂಕಗೊಂಡಿರುವ ಪಾಕಿಸ್ತಾನ, ಟರ್ಕಿಯ ಸಹಾಯವನ್ನು ಬೇಡಿಕೊಂಡಿದೆ. ಪ್ರಧಾನಿ ಶಹಬಾಜ್ ಷರೀಫ್ ಟರ್ಕಿಶ್ ರಾಯಭಾರಿ ಡಾ. ಇರ್ಫಾನ್ ನೆಜಿರೋಗ್ಲು ಅವರೊಂದಿಗೆ ಚರ್ಚಿಸಿದ್ದು , ತನಿಖೆಗೆ ಅಂತಾರಾಷ್ಟ್ರೀಯ
ಟರ್ಕಿ ಸಹಾಯಕ್ಕೆ ಪಾಕಿಸ್ತಾನ ಮನವಿ


ಇಸ್ಲಾಮಾಬಾದ್, 04 ಮೇ (ಹಿ.ಸ.) :

ಆ್ಯಂಕರ್ : ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತದ ಪ್ರತಿಕ್ರಿಯೆಯಿಂದ ಆತಂಕಗೊಂಡಿರುವ ಪಾಕಿಸ್ತಾನ, ಟರ್ಕಿಯ ಸಹಾಯವನ್ನು ಬೇಡಿಕೊಂಡಿದೆ.

ಪ್ರಧಾನಿ ಶಹಬಾಜ್ ಷರೀಫ್ ಟರ್ಕಿಶ್ ರಾಯಭಾರಿ ಡಾ. ಇರ್ಫಾನ್ ನೆಜಿರೋಗ್ಲು ಅವರೊಂದಿಗೆ ಚರ್ಚಿಸಿದ್ದು , ತನಿಖೆಗೆ ಅಂತಾರಾಷ್ಟ್ರೀಯ ತಂಡ ರಚಿಸಬೇಕು ಮತ್ತು ಟರ್ಕಿಯೂ ಇದರಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಪಾಕಿಸ್ತಾನ ದಾಳಿಯಲ್ಲಿ ಪಾಲ್ಗೊಂಡಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಭಾರತವು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಸಿಂಧೂ ಜಲ ಒಪ್ಪಂದ ರದ್ದುಪಡಿಸಿರುವುದರ ಜೊತೆಗೆ ಪಾಕಿಸ್ತಾನಿ ನಾಗರಿಕರ , ವ್ಯಾಪಾರ, ಅಂಚೆ ಹಾಗೂ ವಿಮಾನ ಸಂಚಾರವನ್ನು ನಿಲ್ಲಿಸಿರುವುದರಿಂದ ಪಾಕಿಸ್ತಾನದಲ್ಲಿ ಅರಾಜಕತೆ ಉಂಟಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande