ಬದರೀನಾಥ್, 04 ಮೇ (ಹಿ.ಸ.) :
ಆ್ಯಂಕರ್ : ವಿಶ್ವಪ್ರಸಿದ್ಧ ಬದರೀನಾಥ್ ಧಾಮದ ಬಾಗಿಲುಗಳು ಭಾನುವಾರ ಬೆಳಿಗ್ಗೆ ಭಕ್ತರಿಗೆ ತೆರೆದವು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉಪಸ್ಥಿತರಿದ್ದರು.
40 ಕ್ವಿಂಟಲ್ ಹೂವಿನಿಂದ ಅಲಂಕೃತವಾದ ದೇವಾಲಯದಲ್ಲಿ ಶ್ರೀ ಕುಬೇರ, ಉದ್ದವ, ಗರುಡ ಮತ್ತು ಶಂಕರಾಚಾರ್ಯರ ಮೂರ್ತಿಗಳನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮೊದಲ ಮಹಾಭಿಷೇಕ ಪೂಜೆಯೂ ನೆರವೇರಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa