ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಾಗಲೇ ಬ್ಯಾಂಕ್ ಸದೃಢ : ಎಸ್.ಎಸ್. ಪಾಟೀಲ್
ಸಿಂಧನೂರು, 03 ಮೇ (ಹಿ.ಸ.) : ಆ್ಯಂಕರ್ : ಗ್ರಾಹಕರು ಸಾಲವನ್ನು ಪಡೆದು ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ ಮಾತ್ರ ಬ್ಯಾಂಕ್‍ಗಳು ಆರ್ಥಿಕವಾಗಿ ಸದೃಢವಾಗಿರುತ್ತವೆ ಎಂದು ಸಹಕಾರ ಇಲಾಖೆಯ ಮಾಜಿ ಸಚಿವ ಎಸ್.ಎಸ್. ಪಾಟೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಕೋ ಬ್ಯಾಂಕಿನ 32ನೇ ಸಂಸ್ಥಾಪನಾ ದಿನ
ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಾಗಲೇ ಬ್ಯಾಂಕ್ ಸದೃಢ ; ಎಸ್.ಎಸ್. ಪಾಟೀಲ್


ಸಿಂಧನೂರು, 03 ಮೇ (ಹಿ.ಸ.) :

ಆ್ಯಂಕರ್ : ಗ್ರಾಹಕರು ಸಾಲವನ್ನು ಪಡೆದು ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ ಮಾತ್ರ ಬ್ಯಾಂಕ್‍ಗಳು ಆರ್ಥಿಕವಾಗಿ ಸದೃಢವಾಗಿರುತ್ತವೆ ಎಂದು ಸಹಕಾರ ಇಲಾಖೆಯ ಮಾಜಿ ಸಚಿವ ಎಸ್.ಎಸ್. ಪಾಟೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಕೋ ಬ್ಯಾಂಕಿನ 32ನೇ ಸಂಸ್ಥಾಪನಾ ದಿನಾಚರಣೆಯನ್ನು ಶನಿವಾರ ಉಧ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕಿನ ಗ್ರಾಹಕರು, ಸಿಬ್ಬಂದಿಗಳು, ಸದಸ್ಯರು, ನಿರ್ದೇಶಕರು ಹಾಗೂ ಪದಾಧಿಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಸುಕೋ ಬ್ಯಾಂಕ್‍ನ ಮಾದರಿಯಲ್ಲಿ ಸಂಸ್ಥೆಯನ್ನು ಸದೃಢವಾಗಿ - ಸಮರ್ಥವಾಗಿ ಬೆಳೆಸಲು ಸಾಧ್ಯ ಎಂದರು.

ಸುಕೋ ಬ್ಯಾಂಕನ್ನು 32 ವರ್ಷಗಳ ಹಿಂದೆ ನಾನೇ ಉದ್ಘಾಟಿಸಿದ್ದೆ. ನಾನೇ, ಉದ್ಘಾಟಿಸಿ ಸಂಸ್ಥೆ ನನ್ನ ಕೈಯಿಂದ 32ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುವುದು ವೈಯಕ್ತಿಕವಾಗಿ ತುಂಬಾ ಹೆಮ್ಮೆಯ ವಿಷಯ. ಉದ್ಘಾಟನೆ ಮತ್ತು 32ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಕಲ್ಪಿಸಿದವರಿಗೆ ಕೃತಜ್ಞತೆಗಳು ಎಂದರು.

ಮುಖ್ಯ ಅತಿಥಿ ಪರಮಶಿವಮೂರ್ತಿ ಅವರು, ಕರ್ನಾಟಕ ರಾಜ್ಯದ ಸೌಹಾರ್ದ ಸಹಕಾರಿ ಕಾಯ್ದೆಯು ದೇಶದಲ್ಲೇ ಅತ್ಯತ್ತಮ ಹಾಗೂ ಸದೃಢವಾಗಿದೆ. ಇಂಥಹಾ ಸದೃಢ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಿದ ಕೀರ್ತಿ, ಗೌರವ ಮತ್ತು ಅಭಿಮಾನಗಳು ಎಸ್.ಎಸ್. ಪಾಟೀಲ ಅವರಿಗೆ ಸಲ್ಲುತ್ತದೆ ಎಂದರು.

ಅತಿಥಿಯಾದ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು, ಎಸ್.ಎಸ್. ಪಾಟೀಲ್ ಅವರ ಉದಾರ ಮನೋಭಾವ 32 ವರ್ಷಗಳ ಹಿಂದೆಯೇ ಸಹಕಾರಿ ಕ್ಷೇತ್ರವನ್ನು ಬಲಿಷ್ಠವಾಗಿ - ಸದೃಢವಾಗಿ ಕಟ್ಟಲು ನೆರವಾಗಿದೆ.

ಡಿಸಿಸಿ ಬ್ಯಾಂಕ್ ಲಿಕ್ವಿಡೇಷನ್‍ಗೆ ಹೋಗಿದ್ದರೂ ಎಸ್.ಎಸ್. ಪಾಟೀಲ್ ಅವರ ಸಕಾಲಿಕ ಚಿಂತನೆ- ದೂರದೃಷ್ಟಿಯಿಂದ ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ ಎಂದರು.

ಸುಕೋ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರೂ, ನಿರ್ದೇಶಕರೂ ಆಗಿರುವ ಮನೋಹರ ಮಸ್ಕಿ ಅವರು, ಬ್ಯಾಂಕಿನ ಹುಟ್ಟು ಬೆಳವಣಿಗೆಯನ್ನು ವಿವರಿಸುತ್ತಾ, ಗ್ರಾಹಕರ ಮತ್ತು ಷೇರುದಾರರ ವಿಶ್ವಾಸ - ನಂಬಿಕೆ, ಸಹಕಾರ ಮತ್ತು ಬೆಂಬಲಗಳಿಂದಾಗಿ ಸುಕೋ ಬ್ಯಾಂಕು 2000 ಕೋಟಿ ರೂಪಾಯಿ ವ್ಯವಹಾರ ಮಾಡಿ, ಶೆಡ್ಯೂಲ್ ಬ್ಯಾಂಕ್ ಆಗುವ ಹಂತದಲ್ಲಿದೆ ಎಂದರು.

ಸುಕೋ ಬ್ಯಾಂಕಿನ ಕ್ಯು ಆರ್ ಕೋಡ್ ತಂತ್ರಜ್ಞಾನ ಆಧಾರಿತ ಹಣ ಪಾವತಿ ವ್ಯವಸ್ಥೆಗೆ ಈ ಸಂದರ್ಭದಲ್ಲಿ ಚಾಲನೆ ನೀಡಿ, ಕೆಲ ಗ್ರಾಹಕರಿಗೆ ವಿತರಣೆ ಮಾಡಲಾಯಿತು.

ಸುಕೋ ಬ್ಯಾಂಕಿನ ಉಪಾಧ್ಯಕ್ಷರಾದ ಮುರಳೀಧರರೆಡ್ಡಿ, ನಿರ್ದೇಶಕಿ ಶ್ರೀಮತಿ ಅರ್ಶಿಯಾ, ಮಾಜಿ ನಿರ್ದೇಶಕರಾದ ಜಿ. ಸತ್ಯನಾರಾಯಣ, ಅಮರೇಗೌಡ, ಆರ್.ಜಿ. ದೇಶಪಾಂಡೆ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ರವಿಸುಧಾಕರ್, ಮಾಜಿ ಸಿಇಒ ವೆಂಕಟೇಶ್‍ರಾವ್ ಉಪಸ್ಥಿತರಿದ್ದರು.

ಮಹೇಶ್ ಉಮರಾಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕ್ಲಸ್ಟರ್ ಮ್ಯಾನೇಜರ್ ಶ್ರೀನಿವಾಸ್ ಶಾಖಾಪುರ ಅವರು ವಂದನಾರ್ಪಣೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande