ಆಪರೇಷನ್ ಸಿಂಧೂರ್' ಭಾರತದ ದೃಢಸಂಕಲ್ಪದ ಪ್ರತೀಕ : ಪ್ರಧಾನಿ ಮೋದಿ
ನವದೆಹಲಿ, 25 ಮೇ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ 'ಮನ್ ಕಿ ಬಾತ್' ನ 122ನೇ ಸಂಚಿಕೆಯಲ್ಲಿ ಮಾತನಾಡುತ್ತ, 'ಆಪರೇಷನ್ ಸಿಂಧೂರ್' ಕೇವಲ ಸೇನಾ ಕಾರ್ಯಾಚರಣೆ ಮಾತ್ರವಲ್ಲ, ಅದು ಹೊಸ ಭಾರತದ ಧೈರ್ಯ, ದೃಢನಿಶ್ಚಯ ಮತ್ತು ಬದಲಾವಣೆಯ ಪ್ರತೀಕವಾಗಿದೆ ಎಂದು ಹೇಳಿದರು.
Pm


ನವದೆಹಲಿ, 25 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ 'ಮನ್ ಕಿ ಬಾತ್' ನ 122ನೇ ಸಂಚಿಕೆಯಲ್ಲಿ ಮಾತನಾಡುತ್ತ, 'ಆಪರೇಷನ್ ಸಿಂಧೂರ್' ಕೇವಲ ಸೇನಾ ಕಾರ್ಯಾಚರಣೆ ಮಾತ್ರವಲ್ಲ, ಅದು ಹೊಸ ಭಾರತದ ಧೈರ್ಯ, ದೃಢನಿಶ್ಚಯ ಮತ್ತು ಬದಲಾವಣೆಯ ಪ್ರತೀಕವಾಗಿದೆ ಎಂದು ಹೇಳಿದರು.

ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಅಪರೂಪದ ಶೌರ್ಯವನ್ನು ತೋರಿದ ಹಿನ್ನೆಲೆಯಲ್ಲಿ, ಪ್ರಧಾನಿ ಅವರು ಸೈನಿಕರ ಸಾಹಸವನ್ನು ಪ್ರಶಂಸಿಸಿದರು. “ಭಾರತೀಯ ಸೇನೆ ಶತ್ರು ನೆಲೆಗಳ ಮೇಲೆ ನಿಖರ ದಾಳಿ ನಡೆಸಿ, ಭಯೋತ್ಪಾದಕರ ನೈತಿಕ ಬಲವನ್ನು ಮುರಿದಿದೆ. ಈ ಕಾರ್ಯಾಚರಣೆ ಭಯೋತ್ಪಾದನೆಯ ವಿರುದ್ಧ ಭಾರತದ ಅಚಲ ಸಂಕಲ್ಪವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದೆ,” ಎಂದು ಮೋದಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande