ಕೋಲಾರ, 0೬ ಮಾರ್ಚ್ (ಹಿ.ಸ) :
ಆ್ಯಂಕರ್ : ತಾಲ್ಲೂಕಿನ ವಕ್ಕಲೇರಿ ಗ್ರಾಮದ ಕೋದಂಡರಾಮಸ್ವಾಮಿಯ ಬ್ರಹ್ಮರಥೋತ್ಸವವು ಭಾನುವಾರ ಶ್ರದ್ಧಾಭಕ್ತಿಗಳಿಂದ ನೆರವೇರಿತು. ಬೆಳಗ್ಗೆ ಕೋದಂಡರಾಮಸ್ವಾಮಿಯ ಮೂರ್ತಿಗಳಿಗೆ ನಾನಾ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ನಂತರ ಸೀತಾರಾಮ ಕಲ್ಯಾಣೋತ್ಸವು ಧಾರ್ಮಿಕ ಆಚರಣೆ ಮೂಲಕ ನೆರವೇರಿಸಿದ ನಂತರ ಅಲಂಕೃತ ರಥದಲ್ಲಿ ಕೋದಂಡರಾಮಸ್ವಾಮಿ ಉತ್ಸವಮೂರ್ತಿಯನ್ನು ಕುಳ್ಳರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು ಮಾತನಾಡಿ ಪ್ರತಿವರ್ಷದಂತೆ ಶ್ರೀ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಭಕ್ತರು ಸ್ವಾಮಿ ದರ್ಶನ ಪಡೆದಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನಡೆದಾಗ ಮಾತ್ರ, ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಧ್ಯವಾಗುತ್ತದೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯನ್ನು ಕರುಣಿಸಿ ರೈತರು ಜೀವನ ಉತ್ತಮವಾಗಲಿ ಎಂದು ಇದೇ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.
ಶ್ರೀರಾಮನವಮಿ ಕೇವಲ ದೇವರ ಕಾರ್ಯ ಮಾತ್ರವಲ್ಲ, ನಮ್ಮ ಬದುಕಿನ ಆದರ್ಶವಾಗಿಯೂ ನಾವು ಆಚರಿಸುತ್ತೇವೆ, ರಾಮನ ಮಹಿಮೆ, ಪ್ರಜಾಪ್ರೇಮ ನಮಗೆ ಆದರ್ಶವಾಗಿದ್ದು, ಪ್ರತಿ ವರ್ಷವೂ ಅದ್ದೂರಿಯಿಂದ ಆಚರಿಸಿಕೊಂಡು ಬರುತ್ತಿರುವುದಾಗಿ ತಿಳಿಸಿ, ಅನ್ನದಾನಕ್ಕೆ ಚಾಲನೆ ನೀಡಲಾಯಿತು.
ಕೋದಂಡರಾಮಸ್ವಾಮಿ ದೇವಾಲಯದ ಅರ್ಚಕರಾದ ರಾಜು, ಸುಬ್ರಮಣಿ, ಭಾರ್ಗವ, ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮು, ಮುಖಂಡರಾದ ಯಶೋಧಮ್ಮ, ಕನ್ವಿನರ್ ಮಹೋಹರಗೌಡ, ಬಿ.ಎನ್.ಮುನಿರಾಜು, ಗ್ರಾ.ಪಂ ಸದಸ್ಯೆ ವಿಜಯಲಕ್ಷಿö್ಮ ಮಂಜುನಾಥ್, ಮಾರಿಕಾಂಭ ಯುವಕರ ಸಂಘದ ಪದಾಧಿಕಾರಿಗಳು, ಟೈಲರ್ ಮುನಿಯಪ್ಪ, ವಿನಾಯಕ ಭಕ್ತ ಮಂಡಳಿ, ಡೈರಿ ವಿ.ಎಸ್.ನಾಗರಾಜ್, ಎಸ್‌ಟಿಡಿ ಶೀನಪ್ಪ,ಲೋಕೇಶ್ ಮತ್ತು ಗ್ರಾಮಸ್ಥರು ಹಾಜರಿದ್ದರು.
ಚಿತ್ರ ; ಕೋಲಾರ ತಾಲ್ಲೂಕಿನ ವಕ್ಕಲೇರಿ ಗ್ರಾಮದ ಕೋದಂಡರಾಮಸ್ವಾಮಿಯ ಬ್ರಹ್ಮರಥೋತ್ಸವವು ಭಾನುವಾರ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್