ಕೋಲಾರ, ೨೮ ಏಪ್ರಿಲ್(ಹಿ.ಸ) :
ಆ್ಯಂಕರ್ : ರೋಣೂರು ಲಕ್ಷಿö್ಮ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ತನ್ನದೇ ಆದ ಪುರಾತನ ಇತಿಹಾಸವಿದೆ, ಇಲ್ಲಿ ಭಕ್ತರ ಇಷ್ಟಾರ್ಥ ಸಿದ್ದಿಸುವ ಶಕ್ತಿ ಇದ್ದು, ಆ ಸ್ವಾಮಿ ಸಕಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಪ್ರಾರ್ಥಿಸಿದರು.
ಜಿಲ್ಲೆಯ ವೈಕುಂಠಪುರA ಎಂದೇ ಖ್ಯಾತವಾದ ರೋಣೂರಿನಲ್ಲಿ ಅರ್ಜುನನಿಂದ ಪ್ರತಿಷ್ಟಾಪಿಸಲ್ಪಟ್ಟ ಲಕ್ಷಿö್ಮವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ಸವಿತಾ ಸಮಾಜದ ಬಂಧುಗಳಿAದ ನಡೆಯುವ ಅದ್ದೂರಿ ಪುಷ್ಪವಿಮಾನೋತ್ಸವದ ಅಂಗವಾಗಿ ನಡೆದ ಬೆಳಗಿನ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಮಾತನಾಡಿದರು.
ದೇವರ ಪೂಜಾ ಕಾರ್ಯಗಳನ್ನು ನಾವು ಪುರಾತನ ಕಾಲದಿಂದಲೂ ಮಾಡಿಕೊಂಡು ಬಂದಿದ್ದೇವೆ, ಅವರವರ ನಂಬಿಕೆ ಅವರಿಗೆ ದೊಡ್ಡದು, ನಂಬಿಕೆ ಇದ್ದರೆ ಮಾತ್ರವೇ ದೇವರು ಒಲಿಯುತ್ತಾನೆ, ಇದು ಪುರಾಣ ಪ್ರಸಿದ್ದ ದೇವಾಲಯವಾಗಿದ್ದು, ಜಿಲ್ಲೆ,ರಾಜ್ಯ,ದೇಶದಲ್ಲಿ ಒಳ್ಳೆಯ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದರು.
ರಮೇಶ್‌ಕುಮಾರ್ ಅವರು, ದೇವಾಲಯದಲ್ಲಿ ನಡೆದ ಅಭಿಷೇಕ,ವೇದಮಂತ್ರ ಪಠಣ, ಉಪಹಾರ ಸೇವೆ, ಲಡ್ಡು ಪ್ರಸಾದ ವಿನಿಯೋಗ ಸೇವೆಗೆ ಆಗಮಿಸಿ, ಬೆಂಗಳೂರಿನ ಕ್ಲಾರಿನೇಟ್ ವಿದ್ವಾನ್ ಶೇಷಣ್ಣ ಅವರ ಪುತ್ರ ಗಜೇಂದ್ರ ತಂಡದಿAದ ಮಂಗಳವಾದ್ಯ ಗೋಷ್ಟಿಗೆ ಚಾಲನೆ ನೀಡಿದರು.
ರೋಣೂರು ವೈಕುಂಠಪುರ0ನಲ್ಲಿನ ಲಕ್ಷಿö್ಮ ವೆಂಕಟೇಶ್ವರಸ್ವಾಮಿ ರಥೋತ್ಸವದ ನಂತರ ನಡೆಯವ ಈ ಪುಷ್ಪವಿಮಾನೋತ್ಸವ ಅತ್ಯಂತ ಖ್ಯಾತಿ ಗಳಿಸಿದ್ದು, ಈ ಕಾರ್ಯಕ್ರಮವನ್ನು ಸವಿತಾ ಸಮಾಜದ ಮುಖಂಡರು ಪ್ರತಿವರ್ಷ ನಡೆಸಿಕೊಂಡು ಬಂದಿರುವುದು ದೇವರ ಕಾರ್ಯಗಳಲ್ಲಿ ಸಮಾಜದ ಎಲ್ಲಾ ಬಂಧುಗಳು ಒಟ್ಟುಗೂಡಿ ಕೈಜೋಡಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ರೋಣೂರು ಗ್ರಾ.ಪಂ ಸದಸ್ಯ ಆರ್.ಕೆ.ಎಸ್.ಮಂಜುನಾಥ್, ದೇವಾಲಯದ ಕುರಿತು ತಿಳಿಸಿಕೊಟ್ಟು, ಅನಾದಿಕಾಲದಿಂದಲೂ ಸವಿತಾ ಸಮಾಜದ ಬಜ್ಜಪ್ಪ,ವೀರನಾರಾಯಣಪ್ಪನವರ ಮಾರ್ಗದರ್ಶನದಲ್ಲಿ ಸಮುದಾಯದ ಮುಖಂಡರಾದ ಅಂಕತಟ್ಟಿ ಮುನ್ನಾರಾಯಣಪ್ಪ, ಪಿಲ್ಲಪ್ಪ, ಬಳಗೆರೆ ಹನುಮಂತಪ್ಪ, ಗೊರಮಡಗು ಪೆದ್ದನಾರಾಯಣಪ್ಪ, ಶಿಡ್ಲಘಟ್ಟ ಬಸಪ್ಪ, ಆನೂರು ಸುಬ್ಬನ್ನ, ಶ್ರೀನಿವಾಸಪುರ ಸೀತರಾಮಪ್ಪ, ಅವಲಕುಪ್ಪ ಪೆದ್ದವೆಂಕಟಮಣಪ್ಪ, ಪಾಪನ್ನ, ರೋಣೂರು ವೆಂಕಟಪ್ಪ, ಹನುಮಂತಪ್ಪ, ದಿಂಬಾಲು ನಾರಾಯಣಸ್ವಾಮಿ, ತಿನ್ನಲಿ ಸಂಜೀವಪ್ಪ, ಬೆಂಗಳೂರಿನ ಮೇಘನಾತಯ್ಯನವರ ಸಮ್ಮುಖದಲ್ಲಿ ಈ ಪುಷ್ಪವಿಮಾನೋತ್ಸವ ಅದ್ದೂರಿಯಿಂದ ನಡೆಸಿಕೊಂಡು ಬರಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ಮೋಹನ್ ಬಾಬು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ವೇ ಇಲಾಖೆ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಸುರೇಶ್‌ಬಾಬು, ಮಾಜಿ ತಾಪಂ ಸದಸ್ಯ ಎಲ್.ವಿ.ಗೋವಿಂದಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ರಸಭೆ ಮಾಜಿ ಅಧ್ಯಕ್ಷ ಬಿ.ಎಲ್.ಪ್ರಕಾಶ್,ಸವಿತಾ ಸಮಾಜ ಮಾಜಿ ಅಧ್ಯಕ್ಷ ಎಸ್.ಮಂಜುನಾಥ್ ಮತ್ತಿತರರಿದ್ದರು.
ಚಿತ್ರ ; ಕೋಲಾರ ಜಿಲ್ಲೆಯ ವೈಕುಂಠಪುರ0 ಎಂದೇ ಖ್ಯಾತವಾದ ರೋಣೂರಿನಲ್ಲಿ ಅರ್ಜುನನಿಂದ ಪ್ರತಿಷ್ಟಾಪಿಸಲ್ಪಟ್ಟ ಲಕ್ಷಿö್ಮವೆಂಕಟರಮಣಸ್ವಾಮಿ ಪುಷ್ಪವಿಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್