ನವದೆಹಲಿ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಫ್ರಾನ್ಸ್ ನಡುವೆ 63 ಸಾವಿರ ಕೋಟಿ ರೂ. ಮೌಲ್ಯದ 26 ರಫೇಲ್ ಮೆರೈನ್ ಕಡಲ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ನವದೆಹಲಿಯಲ್ಲಿ ಸಹಿ ಹಾಕಲಾಯಿತು. ಭಾರತೀಯ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಮತ್ತು ಫ್ರೆಂಚ್ ರಾಯಭಾರಿ ಒಪ್ಪಂದಕ್ಕೆ ಸಹಿ ಹಾಕಿದರು.
ಈ ವಿಮಾನಗಳಲ್ಲಿ 22 ಸಿಂಗಲ್ ಸೀಟರ್ ಮತ್ತು 4 ಟ್ವಿನ್ ಸೀಟರ್ ರಫೇಲ್ ಎಂ ಗಳು ಒಳಗೊಂಡಿವೆ.
ಒಪ್ಪಂದದ ಶರತ್ತಿನಂತೆ, ಮೊದಲ ವಿಮಾನವನ್ನು 37 ತಿಂಗಳೊಳಗೆ ಭಾರತಕ್ಕೆ ಹಸ್ತಾಂತರವಾಗಲಿದೆ. ಈ ಹೊಸ ಯುದ್ಧ ವಿಮಾನಗಳು ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಯಲ್ಲಿ ಸೇವೆ ಸಲ್ಲಿಸಲಿವೆ. ಹಳೆಯ ಯುದ್ಧವಿಮಾನಗಳನ್ನು ನಿವೃತ್ತಿಗೊಳಿಸುವ ಉದ್ದೇಶದೊಂದಿಗೆ ಈ ಖರೀದಿ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa