ಕೋಲಾರ, ೨೮ ಏಪ್ರಿಲ್ (ಹಿ.ಸ) :
ಆ್ಯಂಕರ್ : ಮುಸ್ಲಿಂ ಸಮುದಾಯದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಗರದ ಶಾಹಿ ಈಗ್ದಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು
ಪ್ರತಿಭಟನೆಗೂ ಮೊದಲು ಎಲ್ಲಾ ಉಲಮಾಗಳು ಹಾಗೂ ಮುಸ್ಲಿಂ ಸಮುದಾಯದ ಸಾವಿರಾರು ಜನರು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದ ದೇಶದ ನಾಗರಿಕರ ಪರವಾಗಿ ಮೌನಾಚರಣೆ ಮಾಡಿದರು.
ಕೋಲಾರದ ಉಲಮಾಗಳ ನೇತೃತ್ವದಲ್ಲಿ ನಡೆದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಶಾಹಿ ಈದ್ಗಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ಭಾಗವಹಿಸಿದರು.
ಮೌಲಾನ ಅತೀಕ್ ಉರ್ ರೆಹಮಾನ್ ಮಾತನಾಡಿ ನಮ್ಮ ಸಮುದಾಯದಲ್ಲಿ ಜನರ ಬಳಿ ಚಂದಾ ಮಾಡಿ ಮಸೀದಿಗಳನ್ನು ನಾವು ಕಟ್ಟೋದು, ಬೇರೆ ಧರ್ಮದ ದವರ ಧಾರ್ಮಿಕ ಆಸ್ತಿ ಪಾಸ್ತಿಯನ್ನು ಸಹ ಸರ್ಕಾರ ರಕ್ಷಣೆ ಮಾಡಿ ಅಭಿವೃದ್ಧಿ ಪಡಿಸಿದರೆ ನಾವು ಸರ್ಕಾರದ ಜೊತೆಗೆ ನಿಲ್ಲುತ್ತೇವೆ, ನಮ್ಮ ದೇಶದಲ್ಲಿ ಹಿಂದೂ ಮುಸಲ್ಮಾನರರು ಅಣ್ಣ ತಮ್ಮಂದಿರAತೆ ಬಾಳುತ್ತಿದ್ದು ನಮ್ಮಲ್ಲಿ ಒಡಕು ತರುವ ಕೆಲಸವನ್ನು ಕೇಂದ್ರ ಸರ್ಕಾರವು ಮಾಡತ್ತಿದೆ ಎಂದು ಆರೋಪಿಸಿದರು.
ಮಾಲೌನ ಕಲೀಂ ಉಲ್ಲಾ ಮಾತನಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲಾ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆದೇಶದಂತೆ ನಾವು ಪ್ರತಿಭಟನೆಯನ್ನು ಶಾಂತಿಯ ರೂಪದಲ್ಲಿ ಮಾಡತ್ತೇವೆ
ಮೌಲಾನ ಷಫಿ ಉರ್ ರೆಹಮಾನ್ ಮಾತನಾಡಿ ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನ ಹಾಗೂ ಷರಿಯತ್ ನ ವಿರುದ್ಧವಾಗಿದ್ದು ಕೂಡಲೇ ಹಿಂಪಡೆಯಬೇಕು ದೆಹಲಿಯ ನಡೆದ ಕಿಸಾನ್ ಹೋರಾಟದ ರೀತಿಯಲ್ಲಿ ನಾವು ಸಹ ಹೋರಾಟ ಮಾಡಲಿಕ್ಕೆ ತಯರಾಗುತ್ತೇವೆ.
ಪ್ರತಿಭಟನೆಯಲ್ಲಿ ಮೌಲಾನ ಖಲೀಲುಲ್ಲಾ ರಶಾದೀ, ಮೌಲಾನ ಅಲೀ ಹಸನ್ ರಿಜ್ವಿ, ಮೌಲಾನ ಜುಲ್ಫಿಕರ್ ಸಲ್ಫಿ, ಮೌಲಾನ ಲಯೀಕುಲ್ಲಾ ಮನ್ಸೂರಿ ಭಾಗವಹಿಸಿದ್ದರು.
ಚಿತ್ರ : ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ಜಾರಿ ಮಾಡಿರುವುದನ್ನು ವಿರೋಧಿಸಿ ಕೋಲಾರದಲ್ಲಿ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್