ಭೋಪಾಲ್, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದ ಅಬಕಾರಿ ಇಲಾಖೆಯ ನಕಲಿ ಚಲನ್ ಹಗರಣದ ಹಿನ್ನೆಲೆಯಲ್ಲಿ, ಇಂದೋರ್, ಭೋಪಾಲ್ ಮತ್ತು ಜಬಲ್ಪುರದಲ್ಲಿ ಮದ್ಯ ಗುತ್ತಿಗೆದಾರರ ಮನೆಗಳು ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಇಂದೋರ್‌ನಲ್ಲಿ 18 ಸ್ಥಳಗಳಲ್ಲಿ, ಜಬಲ್ಪುರದಲ್ಲಿ ಜೈಸ್ವಾಲ್ ಮತ್ತು ಚೌಕ್ಸೆ ಗ್ರೂಪ್ ಮೇಲೆ, ಭೋಪಾಲಿನಲ್ಲಿ ಮದ್ಯ ವ್ಯಾಪಾರಿಗಳ ಅಡಗುತಾಣಗಳ ಮೇಲೆ ದಾಳಿ ನಡೆದಿದೆ.
ದಾಳಿ ವೇಳೆ ದಾಖಲೆಗಳು, ಬ್ಯಾಂಕ್ ವಿವರಗಳು, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ.
2015-2018 ರ ನಡುವೆ ನಕಲಿ ಚಲನ್ ಮೂಲಕ ಕೋಟ್ಯಂತರ ರೂ. ಮೌಲ್ಯದ ಮದ್ಯ ಕಳವು ನಡೆದಿದ್ದು, ಹಗರಣದ ಮೊತ್ತವು 100 ಕೋಟಿ ರೂ. ತಲುಪಬಹುದು ಎನ್ನಲಾಗಿದೆ.
ಅಬಕಾರಿ ಇಲಾಖೆಯ ಸಹಾಯಕ ಆಯುಕ್ತ ಸಂಜೀವ್ ದುಬೆ ಸೇರಿದಂತೆ ಆರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಇಡಿ ತನಿಖೆ ಮುಂದುವರೆದಿದ್ದು, ಹೆಚ್ಚಿನ ಬಂಧನಗಳ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa