ಪುಣೆ, 26 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಇಂದು ಮಹಾರಾಷ್ಟ್ರದ ಪುಣೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ಸಂತೋಷ್ ಜಗದಾಳೆ ಹಾಗೂ ಕೌಸ್ತುಭ್ ಗಣಬೋಟೆ ಅವರ ನಿವಾಸಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ.
ನಡ್ಡಾ ಸಂಜೆ 6:40ಕ್ಕೆ ಕರ್ವೆ ನಗರದಲ್ಲಿನ ಜ್ಞಾನದೀಪ್ ಸೊಸೈಟಿಯಲ್ಲಿ ಸಂತೋಷ್ ಜಗದಾಳೆ ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿ ನಂತರ 7:00ಕ್ಕೆ ಸಾಯಿ ನಗರ ಬಡಾವಣೆಯಲ್ಲಿರುವ ಕೌಸ್ತುಭ್ ಗಣಬೋಟೆ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa