ಚಂಡೀಗಡ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನಿ ನಾಗರಿಕರಿಗೆ ದೇಶ ತೊರೆಯಲು ಭಾರತದ ಆದೇಶದ ಹಿನ್ನೆಲೆ, ಪಂಜಾಬ್ ನ ಅಟ್ಟಾರಿ ಗಡಿಯಲ್ಲಿ ಸತತ ಎರಡನೇ ದಿನವಾದ ಇಂದು ಗದ್ದಲ ಮುಂದುವರೆದಿದೆ. ಹಲವರು ತಮ್ಮ ದೇಶಕ್ಕೆ ಮರಳಲು ಬಂದಾಗ, ಬಿಎಸ್‌ಎಫ್ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ತಡೆದಿದ್ದಾರೆ.
ಹಲವಾರು ಮಹಿಳೆಯರು ಪಾಕಿಸ್ತಾನ ತೆರಳಲು ಗಡಿಗೆ ಆಗಮಿಸಿದ್ದರು. ಇವರು ಭಾರತದಲ್ಲಿ ಜನಿಸಿ, ಪಾಕಿಸ್ತಾನದಲ್ಲಿ ವಿವಾಹವಾದವರು. ಪಾಕಿಸ್ತಾನಿ ಪೌರತ್ವ ಪಡೆದಿಲ್ಲದ ಇವರನ್ನು ಗಡಿ ದಾಟಲು ನಿರಾಕರಿಸಲಾಗಿದೆ. ಕೆಲವರ ಮಕ್ಕಳು ಪಾಕಿಸ್ತಾನಿ ನಾಗರಿಕರಾಗಿದ್ದು, ಪತಿಯು ಗಡಿಯ ಇನ್ನೊಂದು ಬದಿಯಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬಂದಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa