ಮುಂಬಯಿ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದ್ವೇಷ ನಮ್ಮ ಸ್ವಭಾವವಲ್ಲ, ಆದರೆ ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದಲ್ಲಿ ಶಕ್ತಿಯ ಪ್ರದರ್ಶನ ಅವಶ್ಯಕ, ಎಂದು ಆರ್‌ಎಸ್‌ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಹೇಳಿದ್ದಾರೆ. ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ದೇಶವಾಸಿಗಳ ಹೃದಯಗಳಲ್ಲಿ ನೋವಿದೆ ಮತ್ತು ಈಗ ಶಕ್ತಿಶಾಲಿತ್ವವನ್ನು ತೋರಿಸಬೇಕಾದ ಕ್ಷಣ ಬಂದಿದೆ ಎಂದರು.
ಮುಂಬೈಯ ದೀನನಾಥ್ ಥಿಯೇಟರ್‌ನಲ್ಲಿ ನಡೆದ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡುತ್ತಾ, ಒಗ್ಗಟ್ಟಿನಿಂದಲೇ ದುಷ್ಪ್ರ ಶಕ್ತಿಗಳಿಗೆ ತಕ್ಕ ಪಾಠ ಕಲಿಸಬಹುದು. ನಮ್ಮ ಧರ್ಮವೇ ಮಾನವೀಯತೆ ಎಂದರು. ಭಾರತದ ಸಂವಿಧಾನ ಜಾತ್ಯತೀತವಾದದ್ದು, ಅದು ಸಹಸ್ರಾರು ವರ್ಷದ ಸಂಸ್ಕೃತಿಯಿಂದ ಬಂದಿದೆ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa