ನವದೆಹಲಿ, 22 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಾಗತಿಕ ಮಾರುಕಟ್ಟೆಗಳಲ್ಲಿ ಇಂದು ದೌರ್ಬಲ್ಯದ ಚಿಹ್ನೆಗಳು ಕಂಡುಬಂದಿವೆ. ಕಳೆದ ವಾರ ಅಮೆರಿಕದ ಮಾರುಕಟ್ಟೆಗಳು ತೀವ್ರ ನಷ್ಟದೊಂದಿಗೆ ಮುಕ್ತಾಯಗೊಂಡವು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡ್ ಅಧ್ಯಕ್ಷ ಜೆರೋಮ್ ಪೊವೆಲ್ ವಿರುದ್ಧ ಟೀಕಿಸಿದ ಬಳಿಕ, ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಎಸ್ ಪಿ 500 ಮತ್ತು ನಾಸ್ಡಾಕ್ ಸೂಚ್ಯಂಕಗಳು ಶೇ.2 ಕ್ಕಿಂತ ಹೆಚ್ಚು ಕುಸಿದಿದ್ದರೆ, ಡೌ ಜೋನ್ಸ್ ಫ್ಯೂಚರ್ಸ್ ಇಂದು ಶೇ.0.44ರಷ್ಟು ಏರಿಕೆಯಲ್ಲಿದೆ. ಈ ಮಧ್ಯೆ, ಏಷ್ಯಾದ ಮಾರುಕಟ್ಟೆಗಳಲ್ಲಿ ಮಿಶ್ರ ವಹಿವಾಟು ಕಂಡುಬಂದಿದೆ. ಶಾಂಘೈ, ಜಕಾರ್ತಾ, ಕೋಸ್ಪಿ ಮತ್ತು ಸ್ಟ್ರೈಟ್ಸ್ ಟೈಮ್ಸ್ ಸೂಚ್ಯಂಕಗಳು ಏರಿಕೆಯಾಗಿದರೆ, ತೈವಾನ್, ನಿಕ್ಕಿ, ಹ್ಯಾಂಗ್ ಸೆಂಗ್ ಮತ್ತು ಜಿಐಎಫಟಿ ನಿಫ್ಟಿ ಸೂಚ್ಯಂಕಗಳು ಇಳಿಕೆಯಲ್ಲಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa