ನವದೆಹಲಿ, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜವಾಹರಲಾಲ್ ನೆಹರೂ ನಮಗೆ ರಾಜಕೀಯ ತಂತ್ರಗಳನ್ನು ಕಲಿಸಿದ ವ್ಯಕ್ತಿಯಲ್ಲ. ಅವರು ನಮ್ಮೊಳಗಿನ ಭಯವನ್ನು ತೊಡೆದುಹಾಕಿ, ಸತ್ಯದ ಹಾದಿಯಲ್ಲಿ ಧೈರ್ಯವಾಗಿ ನಡೆಯಲು ಪ್ರೇರಣೆಯಾದರು,” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅವರು ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ಈ ಮೂಲಕ ನೆಹರೂ ಪರಂಪರೆಯ ಮಹತ್ವವನ್ನು ಉಲ್ಲೇಖಿಸಿ, “ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಅವರು ಜನತೆಗೆ ದಬ್ಬಾಳಿಕೆಯನ್ನು ಎದುರಿಸುವ ಶಕ್ತಿಯನ್ನು ತುಂಬಿದರು. ಅವರ ಶ್ರೇಷ್ಠವಾದ ಪರಂಪರೆ ಸತ್ಯದ ನಿರಂತರ ಅನ್ವೇಷಣೆಯಲ್ಲಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.“ಅವರ ತತ್ತ್ವಗಳು ಹಾಗೂ ಚಿಂತನೆಗಳು ಈ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ,” ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa