ಮುಂಬಯಿ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರಸ್ತೆ ಹಾಗೂ ವಸಾಯಿಯಲ್ಲಿ ನಡೆದ ಪೊಲೀಸರ ದಾಳಿಯಲ್ಲಿ ಸುಮಾರು 22 ಕೋಟಿ ರೂ. ಮೌಲ್ಯದ ಕೊಕೇನ್ ವಶಪಡಿಸಲಾಗಿದೆ.
ಮೀರಾ ಭಯಂದರ್ ವಸೈ ವಿರಾರ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಬಿನಾ ಶೇಖ್ ಎಂಬ ಮಹಿಳೆಯಿಂದ 11.8 ಕೆಜಿ ಕೊಕೇನ್, ನೈಜೀರಿಯಾ ಮೂಲದ ವ್ಯಕ್ತಿಯಿಂದ 2.6 ಕೆಜಿ ಮತ್ತು ಕ್ಯಾಮರೂನ್‌ನ ಮಹಿಳೆಯಿಂದ 433 ಗ್ರಾಂ ಕೊಕೇನ್ ವಶಕ್ಕೆ ಪಡೆದಿದ್ದಾರೆ.
2.84 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ಭಾರತೀಯ ನೋಟುಗಳು ಸಹ ವಶಪಡಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa