ಬಳ್ಳಾರಿ : ವಜಾಗೊಂಡಿರುವ ಕಾರ್ಮಿಕರ ಪುನರ್ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ
ಬಳ್ಳಾರಿ, 16 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಆರ್ಥಿಕ ನಷ್ಟ ಸರಿತೂಗಿಸುವ ಅವೈಜ್ಞಾನಿಕ ನೆಪ ನೀಡಿ ಏಕಾಏಕಿ ಕೆಲಸದಿಂದ ವಜಾ ಮಾಡಿರುವ 60 ಕಾರ್ಮಿಕರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಲು ಆಗ್ರಹಿಸಿ ಒಕ್ಕೂಟದ ಕಾರ್
ಬಳ್ಳಾರಿ : ವಜಾಗೊಂಡಿರುವ ಕಾರ್ಮಿಕರ ಪುನರ್ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ


ಬಳ್ಳಾರಿ : ವಜಾಗೊಂಡಿರುವ ಕಾರ್ಮಿಕರ ಪುನರ್ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ


ಬಳ್ಳಾರಿ, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಆರ್ಥಿಕ ನಷ್ಟ ಸರಿತೂಗಿಸುವ ಅವೈಜ್ಞಾನಿಕ ನೆಪ ನೀಡಿ ಏಕಾಏಕಿ ಕೆಲಸದಿಂದ ವಜಾ ಮಾಡಿರುವ 60 ಕಾರ್ಮಿಕರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಲು ಆಗ್ರಹಿಸಿ ಒಕ್ಕೂಟದ ಕಾರ್ಮಿಕ ಸಂಘಟನೆಯು ಆರ್‍ಬಿಕೆವಿಎಂಯು ಮುಂದೆ ಬುಧವಾರದಿಂದ ಪ್ರತಿಭಟನೆ ಪ್ರಾರಂಭಿಸಿದೆ.

ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಜೆ. ಸತ್ಯಬಾಬು ಅವರು, ಕಳೆದ 10 ರಿಂದ 15 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿರುವ 60 ಕಾರ್ಮಿಕರನ್ನು ಒಕ್ಕೂಟದ ಆರ್ಥಿಕ ನಷ್ಟ ಸರಿತೂಗಿಸುವ ಅವೈಜ್ಞಾನಿಕ ನೆಪ ನೀಡಿ ಏಕಾಏಕಿ ಕೆಲಸದಿಂದ ವಜಾ ಮಾಡಿದ್ದು ತಪ್ಪು. ಅಲ್ಲದೇ, ಒಕ್ಕೂಟದ ಆಡಳಿತ ಮಂಡಲಿಯು ಈ ಕಾರ್ಮಿಕರನ್ನು ಪುನಃ ನೇಮಕ ಮಾಡಿಕೊಳ್ಳುವವರೆಗೂ ಹೋರಾಟ ನಡೆಸುವುದಾಗಿ ಹೇಳಿದರು.

ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿರುವ ಮಾಜಿ ಶಾಸಕ ಎಲ್.ಬಿ.ಪಿ. ಭೀಮಾನಾಯಕ್ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸಿ, ಒಕ್ಕೂಟದ ಆಡಳಿತ ಮತ್ತು ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣ ದಿಕ್ಕುತಪ್ಪಿಸುತ್ತಿದ್ದಾರೆ. ಅಧ್ಯಕ್ಷರ ಅಣತಿಗೆ ತಕ್ಕಂತೆ ಆಡಳಿತ ಮಂಡಲಿಯು ಕುಣಿಸುತ್ತಿದ್ದು, ಕಾರ್ಮಿಕರ ಜೀವನವನ್ನು ಹಾಳುಮಾಡುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಈ ಹೋರಾಟದಲ್ಲಿ ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ, ಗಿರಿ, ಶಿವು, ವೀರೇಶ್, ನೆಟ್ಟಕಲ್ಲಪ್ಪ ಇನ್ನಿತರರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande