ಹೊಸಪೇಟೆ, 16 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಾದಕ ವಸ್ತುಗಳ ಬಳಕೆ ವೈರಸ್ ಇದ್ದಂತೆ ಒಂದು ಬಾರಿ ಸೋಂಕಿತರಾದರೇ ಗುಣಮುಖರಾಗುವುದು ಕಷ್ಟ ಸಾಧ್ಯ. ಯುವಜನತೆ ಇವುಗಳಿಂದ ದೂರುವಿದ್ದರೇ ಉಜ್ವಲ ಭವಿಷ್ಯ ನಿಮ್ಮದಾಗಲಿದೆ ಎಂದು ಜಿಲ್ಲಾ ನ್ಯಾಯಧೀಶರಾದ ಅಬ್ದುಲ್ ರಹೀಮಾನ್ ಎ.ನಂದಗಡಿ ಹೇಳಿದ್ದಾರೆ.
ನಗರದ ವಿಜಯನಗರ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನುಗಳ ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಜಯನಗರ ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಮಾದಕ ವಸ್ತುಗಳ ದುರ್ಬಳಕೆ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಹಾಗೂ ಎನ್‍ಡಿಪಿಎಸ್ ಕಾಯ್ದೆ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದ ಕಾರ್ಯಾಗಾರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಯುವಜನತೆಯಲ್ಲಿ ಮಾದಕ ವಸ್ತುಗಳ ವ್ಯಾಮೋಹ ಹೆಚ್ಚಾಗಿದ್ದು, ಅದರ ದುಷ್ಠಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಸಾಮಾಜಿಕ ಜವಾಬ್ದಾರಿಯಿಂದ ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿದೆ.
ನಿಗಧಿತ ಗುರಿ ಸಾಧಿಸಲು ಸಧೃಡ ಮಾನಸಿಕತೆ, ದೈಹಿಕ ಆರೋಗ್ಯ, ಬೌದ್ಧಿಕ ದೃಡತೆ ಅಗತ್ಯವಿದೆ. ಮಾದಕ ವಸ್ತುಗಳ ಬಳಕೆ ಸೇರಿದಂತೆ ವ್ಯಸನಗಳಿಗೆ ದಾಸರಾದರೇ ನಿಮ್ಮಲ್ಲಿರುವ ಎಲ್ಲಾ ಸಾಮಾಥ್ರ್ಯ ವಿನಾಶವಾಗಲಿವೆ. ವಿದ್ಯಾರ್ಥಿ ಜೀವನದಲ್ಲಿ ಓದು, ಜ್ಞಾನ ಸಂಪಾದನೆ, ನಿಗಧಿತ ಗುರಿ ಸಾಧನೆಗೆ ಕಠಿಣ ಪರಿಶ್ರಮ ಇಷ್ಟಕ್ಕೆ ಮಾತ್ರ ಹೆಚ್ಚು ಆದ್ಯತೆ ನೀಡಬೇಕು. ಹಾಗಾದರೆ ನಿಮ್ಮ ಪೆÇೀಷಕರ ಕನಸುಗಳನ್ನು ನನಸು ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪುರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಅನುಕರಣೆ ಮತ್ತು ವ್ಯಾಮೋಹ ಮನಸ್ಥಿತಿ ಹೆಚ್ಚಾಗಿರುತ್ತದೆ. ಒಳ್ಳೆಯದಕ್ಕಿಂತ ಕೆಟ್ಟದರ ಆಕರ್ಷಣೆ ಹೆಚ್ಚಾಗಿರಲಿದೆ. ಹಾಗಾಗಿ ಮಾದಕ ವಸ್ತುಗಳ ದುರ್ಬಳಕೆಗೆ ಹೆಚ್ಚು ಬಲಿಯಾಗುತ್ತಿರುವರಲ್ಲಿ ಯುವ ಸಮೂಹವೇ ಹೆಚ್ಚಾಗಿರುವ ಹಿನ್ನಲೆಯಲ್ಲಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಸಂಘ, ಸಂಸ್ಥೆಗಳ ಹೊಣೆಗಾರಿಕೆಯಾಗಿದೆ. ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಮಾದಕ ವಸ್ತುಗಳ ಅರಿವು ಪಡೆದುಕೊಳ್ಳಬೇಕಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ ಯುವಕರು ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬಳಸಬಾರದು ಹಾಗೂ ಮಾದಕ ವಸ್ತುಗಳಿಂದ ಅಗುವ ದುಷ್ಪರಿಣಾಮದ ಬಗ್ಗೆ ತಿಳಿದಿರಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಹೆಚ್ಚಿನ ಸಮಯವನ್ನು ಮಿಸಲಿಡಬೇಕು. ವಿದ್ಯಾಭ್ಯಾಸ ಹಾಗೂ ಒಳ್ಳೆಯ ಉದ್ದೇಶಕ್ಕೆ ಮೊಬೈಲ್‍ಗಳನ್ನು ಬಳಸಬೇಕು, ಮಾದಕ ವಸ್ತುಗಳಿಂದಾಗುವ ದುಷ್ಟರಿಣಾಮಗಳ ಬಗ್ಗೆ ವಿಚಾರ ಸಂಕಿರಣವನ್ನು ವಿದ್ಯಾರ್ಥಿಗಳನ್ನ ಗುರಿಯಾಗಿಸಿ ಆಯೋಜನೆ ಮಾಡಿರುವುದು ವಿದ್ಯಾರ್ಥಿಗಳ ವಯಸ್ಸು, ವಯೋಮಿತಿಗೆ ತಕ್ಕಂತೆ ಸೆಳೆತಗಳು ಹೆಚ್ಚು. ಅದರಲ್ಲೂ ಮದ್ಯ, ಮಾದಕ ವಸ್ತುಗಳು ಮನಸ್ಸಿಗೆ ಆಹ್ಲಾದಕತೆಯನ್ನು ಹೆಚ್ಚಿಸಿ ನಶೆಯುಕ್ತರನ್ನಾಗಿಸುವ ನಿಟ್ಟಿನಲ್ಲಿ ವ್ಯಸನಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚು. ಇಂತಹ ವ್ಯಸನಗಳಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಲಿವೆ ಎಂದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಫಿಜಿಷಿಯನ್ ಡಾ.ಸೋಮಶೇಖರ್ ಮಾತನಾಡಿ, ಮಾದಕ ವಸ್ತುಗಳಿಗೆ ವ್ಯಸನಗೊಳ್ಳುವ ಪ್ರಮುಖ ಕಾರಣ ಒಂಟಿತನ, ಅಧಿಕ ಹಣ ಮುಖ್ಯವಾಗಿದೆ. ಮದ್ಯ, ನಿಕೋಟಿನ್, ಗಾಂಜಾ ಸುಲಭವಾಗಿ ಸಿಗುವ ಮಾದಕ ವಸ್ತುಗಳಾಗಿವೆ. ಸಿಗರೇಟು, ಬೀಡಿ ಮತ್ತು ತಂಬಾಕುಗಳಿಂದ ಹೃದಯಾಘಾತ ಮತ್ತು ಹೃದಯ ಸಂಬಂಧಿ ಖಾಯಿಲೆಗಳು, ಬಾಯಿ ಕ್ಯಾನ್ಸರ್, ಧ್ವನಿ ಪೆಟ್ಟಿಗೆ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಇತರೆ ಅಂಗಾಂಗಳ ಕ್ಯಾನ್ಸರ್, ಅಸ್ತಮಾ, ಕ್ಷಯರೋಗ, ಶ್ವಾಸಕೋಶ ಸಂಬಂಧಿತ ಸೋಂಕುಗಳು, ಮಧುಮೇಹ, ಮರೆವಿನ ಕಾಯಿಲೆ, ನಪುಂಸಕತ್ವ, ದೃಷ್ಟಿ ದೋಷ ಮತ್ತು ಶ್ರವಣದೋಷ, ರೋಗ ನಿರೋಧಕ ಶಕ್ತಿ ಕುಂಠಿತ, ಮೂಳೆ ಸವೆತ, ಚರ್ಮ ಸಂಬಂಧಿ ಕಾಯಿಲೆಗಳು ಸೇರಿದಂತೆ ಮಹಿಳೆಯರಿಗೆ ಋತು ಚಕ್ರದ ಸಮಸ್ಯೆ, ಬಂಜೆತನ, ಗರ್ಭಧಾರಣೆಯಲ್ಲಿ ಕುಂಠಿತ, ಗರ್ಭಪಾತ, ಗರ್ಭಕೋಶ ಮತ್ತು ಗರ್ಭಕಂಠದ ಕ್ಯಾನ್ಸರ್ ಸಮಸ್ಯೆಗಳು ಹೆಚ್ಚಾಗಲಿವೆ. ಕೇವಲ ಕ್ಷಣಿಕ ಸುಖದ ಸೆಳೆತಕ್ಕೆ ಸಿಕ್ಕು ಅನಾರೋಗ್ಯ ಪೀಡಿತರಾಗಲಿದ್ದೀರಿ ಎಂದು ಜಾಗೃತಿ ಮೂಡಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್