ಬಳ್ಳಾರಿ : ಲಿಂಗತ್ವ ಅಲ್ಪಸಂಖ್ಯಾತರರಿಗೆ ಆರೋಗ್ಯ ಜಾಗೃತಿ ಶಿಬಿರ
ಬಳ್ಳಾರಿ, 16 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ ಎಂದು ಎಫ್‍ಪಿಎಐನ ವ್ಯವಸ್ಥಾಪಕಿ ಎಸ್. ವಿಜಯಲಕ್ಷ್ಮಿ ಅವರು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಲೈಂಗಿಕ ಅಲ್ಪಸಂಖ್ಯಾತರ ಲಿಂಗ ದಿನಾಚರಣೆ ಅಂಗವಾಗಿ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಎಂಎಸ್‍ಎಂ ಸಮುದಾಯವರಿಗೆಆಗಿ ಬಳ್
ಬಳ್ಳಾರಿ : ಲಿಂಗತ್ವ ಅಲ್ಪಸಂಖ್ಯಾತರರಿಗೆ ಆರೋಗ್ಯ ಜಾಗೃತಿ ಶಿಬಿರ


ಬಳ್ಳಾರಿ : ಲಿಂಗತ್ವ ಅಲ್ಪಸಂಖ್ಯಾತರರಿಗೆ ಆರೋಗ್ಯ ಜಾಗೃತಿ ಶಿಬಿರ


ಬಳ್ಳಾರಿ, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ ಎಂದು ಎಫ್‍ಪಿಎಐನ ವ್ಯವಸ್ಥಾಪಕಿ ಎಸ್. ವಿಜಯಲಕ್ಷ್ಮಿ ಅವರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಲೈಂಗಿಕ ಅಲ್ಪಸಂಖ್ಯಾತರ ಲಿಂಗ ದಿನಾಚರಣೆ ಅಂಗವಾಗಿ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಎಂಎಸ್‍ಎಂ ಸಮುದಾಯವರಿಗೆಆಗಿ ಬಳ್ಳಾರಿಯ ಎಫ್‍ಪಿಎಐ ಮತ್ತು ಇನ್ನರ್ ವೀಲ್ ಜಂಟಿಯಾಗಿ ಬುಧವಾರ ಏರ್ಪಡಿಸಿದ್ದ ಆರೋಗ್ಯ ಶಿಕ್ಷಣ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಲಿಂಗತ್ವ ಅಲ್ಪಸಂಖ್ಯಾತರರು ಕೀಳರಿಮೆಯಲ್ಲಿ ಬಿಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಭನೆಯ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಗೇ ಅಂಡ್ ಓಬಿಜಿ ಸೊಸೈಟಿಯ ಕಾರ್ಯದರ್ಶಿ ಡಾ. ಪ್ರಣೀತ ಅಜಯ್, ಇನ್ನರ್ ವೀಲ್‍ನ ಅರ್ಚನಾ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಮಾಣಿಕರಾವ್, ಕಾರ್ಯದರ್ಶಿ ಡಾ. ಸಂಗೀತ ಇನ್ನಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

70 ಕ್ಕೂ ಹೆಚ್ಚಿನ ಸಂಖ್ಯೆಯ ಲಿಂಗತ್ವ ಅಲ್ಪಸಂಖ್ಯಾತರರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande