ಅಮೃತಸರ : 18.227 ಕೆಜಿ ಹೆರಾಯಿನ್ ಜಪ್ತಿ- ಓರ್ವ ಬಂಧನ
ಅಮೃತಸರ, 11 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪಂಜಾಬ್ ನ ಅಮೃತಸರದ ಗಡಿ ವಲಯದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಘರಿಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಖೈರಾ ಗ್ರಾಮದ ಹೀರಾ ಸಿಂಗ್ ಎಂಬಾತನನ್ನು ಬಂಧಿಸಿ 18.227 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ. ತನಿಖೆ
Drugs


ಅಮೃತಸರ, 11 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಂಜಾಬ್ ನ ಅಮೃತಸರದ ಗಡಿ ವಲಯದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಘರಿಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಖೈರಾ ಗ್ರಾಮದ ಹೀರಾ ಸಿಂಗ್ ಎಂಬಾತನನ್ನು ಬಂಧಿಸಿ 18.227 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ.

ತನಿಖೆ ವೇಳೆ ಹೀರಾ ಸಿಂಗ್ ಹಾಗೂ ಅವನ ಸಹಚರ ಕುಲ್ವಿಂದರ್ ಸಿಂಗ್ ಅಲಿಯಾಸ್ ಕಿಂಡಾ ಪಾಕಿಸ್ತಾನ ಮೂಲದ ಮಾದಕ ದ್ರವ್ಯ ಕಳ್ಳಸಾಗಣೆದಾರ ಬಿಲ್ಲಾ ಜೊತೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಗಡಿಯಾಚೆಯಿಂದ ಹೆರಾಯಿನ್ ತಂದು, ಕಳ್ಳಸಾಗಣೆದಾರರ ಸೂಚನೆಯಂತೆ ಪೂರೈಸಲಾಗುತ್ತಿತ್ತು.

ಕುಲ್ವಿಂದರ್ ಸಿಂಗ್ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರೆದಿದ್ದು, ಇಡೀ ಮಾದಕ ಜಾಲವನ್ನು ನಾಶಮಾಡಲು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪಂಜಾಬ್ ಡಿಜಿಪಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande