ಹುಬ್ಬಳ್ಳಿ, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿಯ ಬಿಜೆಪಿ ಪಕ್ಷದ ಕಛೇರಿಯಲ್ಲಿ ರಾಜ್ಯ ಬಿಜೆಪಿಯಿಂದ ನಡೆಯುತ್ತಿರುವ ಭೀಮ್ ಹೆಜ್ಜೆ ಹಾಗೂ ಜನಾಕ್ರೋಶ ಯಾತ್ರೆಯ ಕುರಿತಾದ ಪೂರ್ವ ಸಭೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ನಡೆಸಿದರು. ಧಾರವಾಡ ಜಿಲ್ಲೆಯಿಂದ ಕ್ಷೇತ್ರವಾರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ,ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಅಮೃತ ದೇಸಾಯಿ, ಮಾಜಿ ಶಾಸಕ ಅಶೋಕ ಕಾಟವೆ,ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ,ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಲಿಂಗರಾಜ ಪಾಟೀಲ, ಬಸವರಾಜ ಕುಂದಗೋಳಮಠ,ಜಯತೀರ್ಥ ಕಟ್ಟಿ, ಈರಣ್ಣ ಜಡಿ, ಸಂಜಯ ಕಪಾಟಕರ, ಮಹೇಂದ್ರ ಕೌತಾಳ, ಉಪಮೇಯರ ಬಿಜವಾಡ, ಶಿವಾನಂದ ಗುಂಡಗೋವಿ, ಶಶಿಮೌಳಿ ಕುಲಕರ್ಣಿ,ಪಧಾದಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa