ಕಾಂಗ್ರೆಸ್ ನಿಂದ ಹೊಸ ಶಿಕ್ಷಣ ನೀತಿ ಟೀಕೆ ; ಬಿಜೆಪಿ ಆಕ್ರೋಶ
ನವದೆಹಲಿ, 31 ಮಾರ್ಚ್ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹೊಸ ಶಿಕ್ಷಣ ನೀತಿಯನ್ನು ಟೀಕಿಸಿದ ಹಿನ್ನೆಲೆಯಲ್ಲಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ನಂತರ 60 ವರ್ಷಗಳ ಕಾಲ, ಕಾಂಗ್ರೆಸ್ ದೇಶವನ್ನು
Chug


ನವದೆಹಲಿ, 31 ಮಾರ್ಚ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹೊಸ ಶಿಕ್ಷಣ ನೀತಿಯನ್ನು ಟೀಕಿಸಿದ ಹಿನ್ನೆಲೆಯಲ್ಲಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ನಂತರ 60 ವರ್ಷಗಳ ಕಾಲ, ಕಾಂಗ್ರೆಸ್ ದೇಶವನ್ನು ವಸಾಹತುಶಾಹಿ ಮನಸ್ಥಿತಿಯ ಹಿಡಿತದಲ್ಲಿಟ್ಟುಕೊಂಡಿತ್ತು. ಶಿಕ್ಷಣದ ಮೂಲಕ ಕೋಮುವಾದ ಮತ್ತು ತುಷ್ಟೀಕರಣ ನೀತಿಯನ್ನೇ ಅನುಸರಿಸಿತು. ಆದರೆ ಆರ್‌ಎಸ್‌ಎಸ್ ದೇಶಭಕ್ತಿ ಮತ್ತು ಅಭಿವೃದ್ಧಿಗೆ ಕಾರ್ಯನಿರತವಾಗಿದೆ. ಸೋನಿಯಾ ಗಾಂಧಿಯವರು ಇಟಾಲಿಯನ್ ದೃಷ್ಟಿಕೋಣವನ್ನು ಬದಿಗೊತ್ತಿದರೆ ಮಾತ್ರ ನಿಜವಾದ ದೇಶಭಕ್ತಿ ಕಾಣಲು ಸಾಧ್ಯ, ಎಂದು ಚುಗ್ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande