ಕಲಬುರಗಿ, 26 ಮಾರ್ಚ್ (ಹಿ.ಸ.) :
ಆ್ಯಂಕರ್ : ಒಳಮೀಸಲಾತಿ ಜಾರಿ ಮಾಡದಿದ್ದರೆ ಆತ್ಮಹುತಿ ಆಗುತ್ತದೆ, ಒಳ ಮೀಸಲಾತಿ ಪಡೆಯುವವರೆಗೂ ನಾವು ಮನೆಗೆ ತರಳುವುದಿಲ್ಲ ಎಂದು ಒಳಮೀಸಲಾತಿ ಪರ ಹೋರಾಟಗಾರ ಬಿ ಆರ್ ಭಾಸ್ಕರ ಪ್ರಸಾದ್ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೊಟ್ಟ ಮಾತನ್ನು ಈಡೆರಿಸಲಿ. ತಾವೇ ಹೇಳಿದ ಹಾಗೆ ಒಂದು ವಾರದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲವಾದರೆ ಡಾ. ಬಾಬು ಜಗಜೀವನ ರಾಮ ಅವರ ಜಂಯತಿ ದಿನದನವಾದ ಏಪ್ರಿಲ್ 05 ರಂದು ಬೆಂಗಳೂರು ಚಲೋ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳಮೀಸಲಾತಿ ವಿರೋಧಿಸಿ ಕೆಲ ಸಮಾಜದವರು ಹೋರಾಟಕ್ಕೆ ಮುಂದಾಗಿದ್ದಾರೆ. ಮಾಡಲಿ ಬೇಡ ಅನ್ನುವುದಿಲ್ಲ. ಆದರೆ ಒಳಮೀಸಲಾತಿ ವಿರೋಧಿಸುವುದು ಸಂವಿಧಾನ ವಿರೋಧಿಸಿದಾಗೇ ಎಂದು ಅನೇಕ ಚಿಂತಕರು ಹೇಳಿದ್ದಾರೆ. ಅವರನ್ನು ಹಾವನೂರು ವರದಿ ಮೂಲಕ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಲಾಯಿತು. ಆಗ ನಾವು ವಿರೋಧಿಸಿಲ್ಲ.. ನಮ್ಮದು ತಾಯಿ ಮನಸ್ಸು ಎಂದು ಒಳಮೀಸಲಾತಿ ವಿರೋಧಿ ಬಣವನ್ನು ಟೀಕಿಸಿದರು.
ಹಿಂದೂಸ್ತಾನ್ ಸಮಾಚಾರ್ / Samarth biral