ಮಳೆಗಾಲಕ್ಕೂ ಮುನ್ನ ರಾಜಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ: ಮಹೇಶ್ವರ ರಾವ್ ಸೂಚನೆ
ಬೆಂಗಳೂರು, 18 ಮಾರ್ಚ್ (ಹಿ.ಸ.): ಆ್ಯಂಕರ್: ಬೆಂಗಳೂರು ನಗರದಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಸಂಪೂರ್ಣಗೊಳಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳ ಪ್ರಗ
Visit


ಬೆಂಗಳೂರು, 18 ಮಾರ್ಚ್ (ಹಿ.ಸ.):

ಆ್ಯಂಕರ್:

ಬೆಂಗಳೂರು ನಗರದಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಸಂಪೂರ್ಣಗೊಳಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲು ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಅವರು, ಕಾಮಗಾರಿಗಳನ್ನು ವೇಗಗೊಳಿಸುವಂತೆ ಸೂಚಿಸಿದರು.

ಎನ್ ಡಿಎಂಎಫ್ (₹175 ಕೋಟಿ) ಹಾಗೂ ಕೆಡಬ್ಲುಎಸ್ಆರ್ ಪಿ (₹2000 ಕೋಟಿ) ಯೋಜನೆಗಳಡಿ ನಡೆಯುತ್ತಿರುವ ಕಾಮಗಾರಿಗಳು ಚುರುಕುಗೊಂಡಿದ್ದು, ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಕಲ್ಪಿಸುವ ಮಳೆನೀರು ಕಾಲುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಮೇ ತಿಂಗಳ ಪೂರ್ವ ಮಾನ್ಸೂನ್‌ಗೂ ಮುನ್ನ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಕೃತಿ ಆಧಾರಿತ ಪರಿಹಾರಗಳಿಗೆ ಒತ್ತು

ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯಲು ಪ್ರಕೃತಿ ಆಧಾರಿತ ಪರಿಹಾರಗಳನ್ನು ಅಳವಡಿಸುವಂತೆ ಸೂಚಿಸಿದ ಅವರು, ಜಕ್ಕೂರು ಕೆರೆ ಮಾದರಿಯನ್ನು ಇತರೆ ಕೆರೆಗಳಲ್ಲೂ ಜಾರಿಗೆ ತರಲು ಸಲಹೆ ನೀಡಿದರು. ಕೊಲೊಕಾಸಿಯಾ ಮತ್ತು ಕ್ಯಾನ್ನಾ ಇಂಡಿಕಾ ಸಸಿಗಳನ್ನು ನೆಡುವ ಮೂಲಕ ನೀರು ಶುದ್ಧೀಕರಣಕ್ಕೆ ಉತ್ತೇಜನ ನೀಡಬೇಕು ಎಂದರು.

ಪ್ರಮುಖ ಕಾಮಗಾರಿಗಳ ಪ್ರಗತಿ

ಶ್ರೀನಿವಾಸಪುರ–ಕೋಗಿಲು ಕೆರೆ (1.1 ಕಿ.ಮೀ) ನಡುವೆ ಕಾಲುವೆ ಅಭಿವೃದ್ಧಿ ಮತ್ತು ಸ್ಲೂಯಿಸ್ ಗೇಟ್ ಅಳವಡಿಕೆ, ಬೆಳ್ಳಳ್ಳಿ–ಕಣ್ಣೂರು (660 ಮೀ.) ಹೊಸ ಕಾಲುವೆ ನಿರ್ಮಾಣ, ಚೊಕ್ಕನಹಳ್ಳಿ–ಅಗ್ರಹಾರ (670 ಮೀ.) ಕಾಮಗಾರಿ ಹಾಗೂ ರಾಚೇನಹಳ್ಳಿ ರಸ್ತೆ (600 ಮೀ.) ಅಭಿವೃದ್ಧಿ ಕಾರ್ಯಗಳು ವೇಗವಾಗಿ ಸಾಗುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ನಗರ ಸೌಂದರ್ಯೀಕರಣಕ್ಕೂ ಆದ್ಯತೆ

ದಾಸರಹಳ್ಳಿ ಮುಖ್ಯರಸ್ತೆ ಬಳಿ ಬಫರ್ ವಲಯವನ್ನು ಪಾದಚಾರಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿ, ಆಕರ್ಷಕ ಸಾರ್ವಜನಿಕ ಸ್ಥಳಗಳನ್ನು ನಿರ್ಮಿಸಲು ಯೋಜನೆ ರೂಪಿಸುವಂತೆ ಸೂಚಿಸಿದರು.

ಇತರೆ ನಿರ್ದೇಶನಗಳು

ಆರ್‌ಸಿಸಿ ತಡೆಗೋಡೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದು, ಕೆರೆಗಳ ಮ್ಯಾಪಿಂಗ್ ಮಾಡಿ ಪುನರುಜ್ಜೀವನ ಪಟ್ಟಿ ಸಿದ್ಧಪಡಿಸುವುದು, ಅಗತ್ಯವಿರುವ ಕಡೆ ಸ್ಲೂಯಿಸ್ ಗೇಟ್ ವಿನ್ಯಾಸ ರೂಪಿಸುವುದು ಹಾಗೂ ನಾಗವಾರ ಜಂಕ್ಷನ್‌ನಲ್ಲಿ ಜಲಾವೃತ ತಡೆಯಲು ಕಾಲುವೆ ನಿರ್ಮಾಣ ಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಯೋಜನಾ ಅನುಷ್ಠಾನ ವಿಭಾಗದ ಮುಖ್ಯ ಅಭಿಯಂತರ ರಾಜೇಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande