ಪಾಕಿಸ್ತಾನ ರೈಲು ಅಪಹರಣ : ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಕ್ವೆಟ್ವಾ, 12 ಮಾರ್ಚ್ (ಹಿ.ಸ.) : ಆ್ಯಂಕರ್ : ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬಲೂಚ್ ಲಿಬರೇಶನ್ ಆರ್ಮಿ ದಾಳಿ ಮಾಡಿ ಪ್ರಯಾಣಿಕರನ್ನು ಒತ್ತೆಯಾಳುಗಳಾಗಿರಿಸಿಕೊಂಡಿರುವ ೪೦೦ ಪ್ರಯಾಣಿಕರಿದ್ದ ಪ್ಯಾಸೆಂಜರ್ ರೈಲು ಜಾಫರ್ ಎಕ್ಸ್‌ಪ್ರೆಸ್‌ಗಾಗಿ ಸೇನೆಯು ಆರಂಭಿಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ,
Train


ಕ್ವೆಟ್ವಾ, 12 ಮಾರ್ಚ್ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬಲೂಚ್ ಲಿಬರೇಶನ್ ಆರ್ಮಿ ದಾಳಿ ಮಾಡಿ ಪ್ರಯಾಣಿಕರನ್ನು ಒತ್ತೆಯಾಳುಗಳಾಗಿರಿಸಿಕೊಂಡಿರುವ ೪೦೦ ಪ್ರಯಾಣಿಕರಿದ್ದ ಪ್ಯಾಸೆಂಜರ್ ರೈಲು ಜಾಫರ್ ಎಕ್ಸ್‌ಪ್ರೆಸ್‌ಗಾಗಿ ಸೇನೆಯು ಆರಂಭಿಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ, ಇದುವರೆಗೆ 104 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಮತ್ತು 16 ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ ಬಿಎಲ್‌ಎ 30 ಪಾಕಿಸ್ತಾನಿ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ.

ಪಾಕಿಸ್ತಾನಿ ಮಾಧ್ಯಮ ಜಿಯೋ ನ್ಯೂಸ್ ಪ್ರಕಾರ, ರೈಲು ಒತ್ತೆಯಾಳುಗಳನ್ನು ರಕ್ಷಿಸುವ ಸೇನೆಯ ಕಾರ್ಯಾಚರಣೆ ಬುಧವಾರವೂ ಮುಂದುವರೆದಿದ್ದು, ಜಾಫರ್ ಎಕ್ಸ್‌ಪ್ರೆಸ್‌ನಿಂದ ರಕ್ಷಿಸಲ್ಪಟ್ಟ 57 ಪ್ರಯಾಣಿಕರನ್ನು ಬುಧವಾರ ಬೆಳಿಗ್ಗೆ ಕ್ವೆಟ್ಟಾಗೆ ಕರೆದೊಯ್ಯಲಾಗಿದೆ ಎಂದು ರೈಲ್ವೆ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ರಕ್ಷಿಸಲಾದ ಇತರ 23 ಪ್ರಯಾಣಿಕರು ಮಚ್‌ನಲ್ಲಿದ್ದಾರೆ. ರಕ್ಷಿಸಲಾದ ಈ ಪ್ರಯಾಣಿಕರಲ್ಲಿ 58 ಪುರುಷರು, 31 ಮಹಿಳೆಯರು ಮತ್ತು 15 ಮಕ್ಕಳು ಸೇರಿದ್ದಾರೆ.

ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande