ತಿರುವನಂತಪುರಂ, 12 ಮಾರ್ಚ್ (ಹಿ.ಸ.) :
ಆ್ಯಂಕರ್ : ಕೇರಳದಲ್ಲಿ ಲವ್ ಜಿಹಾದ್ ಮತ್ತು ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಪಿ.ಸಿ. ಜಾರ್ಜ್ ಹೇಳಿದ್ದಾರೆ. ಕಳೆದ ವರ್ಷ ಕೇರಳದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಯುವತಿಯರು ಕಾಣೆಯಾಗಿದ್ದಾರೆ, ಅವರಲ್ಲಿ ಹೆಚ್ಚಿನವರು 'ಲವ್ ಜಿಹಾದ್'ಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಮೀನಚಿಲ್ ತಾಲ್ಲೂಕಿನಿಂದಲೇ ನಾಲ್ಕುನೂರಕ್ಕೂ ಹೆಚ್ಚು ಹುಡುಗಿಯರು ಕಾಣೆಯಾಗಿದ್ದಾರೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ ಪ್ರತಿನಿಧಿ ಜೊತೆ ಮಾತನಾಡಿ, ತಮ್ಮ ರಾಜ್ಯ ಕೇರಳ ಇಸ್ಲಾಮಿಕ್ ಸ್ಟೇಟ್ ಗೆ ನೇಮಕಾತಿ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಕೇರಳದಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಯುವತಿಯರು ಕಾಣೆಯಾಗಿದ್ದಾರೆ. ವಿಶೇಷವೆಂದರೆ ಅವರೆಲ್ಲರೂ ಮುಸ್ಲಿಂ ಯುವಕರೊಂದಿಗೆ ಓಡಿಹೋಗಿದ್ದಾರೆ. ಅವರು ಸಿರಿಯಾ, ಜೋರ್ಡಾನ್ ಮತ್ತು ಅಫ್ಘಾನಿಸ್ತಾನದಲ್ಲಿ 'ಲೈಂಗಿಕ ಗುಲಾಮರಾಗಿ' ಬದುಕುತ್ತಿದ್ದಾರೆ ಎಂಬುದಕ್ಕೆ ಬಲವಾದ ಪುರಾವೆಗಳಿವೆ ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಏಳು ಬಾರಿ ಶಾಸಕರಾಗಿರುವ ಪಿಸಿ ಜಾರ್ಜ್, ಪ್ರಸ್ತುತ ಲವ್ ಜಿಹಾದ್ ಮತ್ತು ಮಾದಕವಸ್ತು ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ. ತಮ್ಮ ಆರೋಪಗಳನ್ನು ಸಾಬೀತುಪಡಿಸಲು ತಮ್ಮ ಬಳಿ ಬಲವಾದ ಪುರಾವೆಗಳಿವೆ ಎಂದು ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa