ರೇಣುಕಾಚಾರ್ಯರ ಶಾಂತಿಯ ಸಂದೇಶಗಳನ್ನು ಪಾಲಿಸಲು ಕರೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ
ರೇಣುಕಾಚಾರ್ಯರ ಶಾಂತಿಯ ಸಂದೇಶಗಳನ್ನು ಪಾಲಿಸಲು ಕರೆ


ಕೋಲಾರ, ೧೨ ಮಾರ್ಚ್ (ಹಿ.ಸ.) :

ಆ್ಯಂಕರ್ : ಸಮಾಜಕ್ಕೆ ಮಾನವ ಧರ್ಮದ ಆದರ್ಶಗಳ ಸೂತ್ತ್ರಗಳನ್ನು ಹಾಗೂ ಸಮಾನತೆಯ ಸಿದ್ದಾಂತಗಳನ್ನು ತಿಳಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ನೀಡಿದಂತ ಶಾಂತಿಯ ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡೆಸಿ ಕೊಳ್ಳುವಂತಾಗ ಬೇಕೆಂದು ತಾಲ್ಲೂಕಿನ ಶ್ರೀ ನಾಗಲಾಪುರ ಸಂಸ್ಥಾನ ಮಠದ ಶ್ರೀ,ಷ,ಬ್ರ. ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಕರೆ ನೀಡಿದರು.

ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿ ವೀರಶೈವ ಧರ್ಮದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಜಗಜ್ಯೋತಿ ಬಸವೇಶ್ವರರು ಇಬ್ಬರು ಮಹಾನ್ ಮಾನವಾತವಾದಿಗಳಾಗಿದ್ದು ಸಮಸಮಾಜದ ಎರಡು ಕಣ್ಣುಗಳಾಗಿದ್ದಾರೆ ಇಷ್ಟ ಲಿಂಗವನ್ನು ಭೊಮಿಗೆ ನೀಡಿದಂತ ಮಹಾ ಪುರುಷರು ಎಂದರು.

ಜಗತ್ತಿನಲ್ಲಿ ನಡೆಯುತ್ತಿದ್ದ ಅನಾಚಾರಗಳನ್ನು ನಿಯಂತ್ರಿಸಲು, ಧ್ವಂಧ ನೀತಿಗಳನ್ನು ಹೋಗಲಾಡಿಸಲು ಸ್ಥಾಪಿಸಿದ ಮಹಾಮಾನವಾತವಾದದ ವೀರ ಶೈವ ಧರ್ಮ ಸ್ಥಾಪಿಸಿದ ಪಂಚ ಪೀಠಗಳಿಂದಾಗಿ ಇಂದು ಸುಮಾರು ೧೨ಸಾವಿರಕ್ಕೂ ಹೆಚ್ಚು ಶಾಖಾ ಮಠಗಳಾಗಿದ್ದು ಜಾತ್ಯತೀತವಾಗಿ ಶಿಕ್ಷಣ, ವಸತಿ, ಅಕ್ಷರದ ದಾಸೋಹಗಳನ್ನು ನಡೆಸುವ ಮೂಲಕ ಹೆಣ್ಣು ಗಂಡು, ಜಾತಿ,ಧರ್ಮಗಳ ಭೇದಬಾವವನ್ನು ಹೋಗಲಾಡಿಸಿ ಸಮಸಮಾಜದ ನಿರ್ಮಾಣಕ್ಕೆ ಸಾಕ್ಷಿಕರಿಸುತ್ತಿದೆ ಎಂದು ತಿಳಿಸಿದರು.

ಬಸವ ಜಯಂತಿಯನ್ನು ಹಿಂದಿನಿಂದ ಆಚರಿಸುತ್ತಿದ್ದು ಸರ್ಕಾರದ ಮಟ್ಟದಲ್ಲಿ ಹಲವು ವರ್ಷಗಳಿಂದ ಆಚರಿಸಲಾಗುತ್ತಾ ಬರುತ್ತಿದೆ. ಕಳೆದ ಮೂರು ವರ್ಷಗಳಿಂದ ಶ್ರೀ ರೇಣುಕಾ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಭಾಗದಲ್ಲಿ ವೀರಶೈವ ಲಿಂಗಾಯಿತ ಸಮುದಾಯದವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಎಲ್ಲರಿಗೂ ಸಮರ್ಪಕವಾದ ಮಾಹಿತಿ ಹೋಗಿದ್ದರೆ ಕಾರ್ಯಕ್ರಮವನ್ನು ವಿಜೃಂಭಣಿಯಿಂದ ಆಚರಿಸ ಬಹುದಿತ್ತು. ಮುಂಬರಲಿರುವ ಬಸವ ಜಯಂತಿಗೆ ಜಿಲ್ಲೆಯಲ್ಲಿರುವ ವೀರಶೈವ ಸಮುದಾಯದ ಎಲ್ಲಾ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತಾಗಬೇಕು, ಸರ್ಕಾರವು ಈ ಮಹಾತ್ಮರ ಜಯಂತಿಯನ್ನು ಆಚರರಿಸಲು ಕೊಟ್ಟಿರುವ ಅವಕಾಶವನ್ನು ಸದ್ಬಳಿಸಿ ಕೊಳ್ಳುವಂತಾಗ ಬೇಕೆಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಮಂಗಳ ಮಾತನಾಡಿ, ವೀರಶೈವ ಸಮುದಾಯದ ಸಂಖ್ಯೆ ತೀರಾ ವಿರಳವಾಗಿದ್ದು ಎಲ್ಲರೂ ಒಂದೇ ವೇದಿಕೆಯಡಿ ಸಂಘಟಿತರಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು. ಸರ್ಕಾರವು ಕೊಟ್ಟಿರುವಂತ ಅವಕಾಶಗಳನ್ನು ಸದ್ಬಳಿಸಿ ಕೊಳ್ಳುವಂತಾಗ ಬೇಕೆಂದು ತಿಳಸಿದರು.

ಮಾಲೂರಿನ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಗ ಅವರು ಮಾತನಾಡಿ ಮಾ ೧೨ ರಂದು ಸರ್ಕಾರವು ಘೋಷಿಸಿರುವ ರೇಣುಚಾರ್ಯ ಜಯಂತಿಯನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿಯೂ ಆಚರಿಸುವಂತಾಗಬೇಕು. ಮುಂದಿನ ಪೀಳಿಗಳಿಗೆ ರೇಣುಕಾಚಾರ್ಯರ ಸಮುದಾಯದ ಮೂಲ ಪುರುಷರಾಗಿದ್ದಾರೆ ಎಂಬ ಅರಿವುಂಟು ಮಾಡ ಬೇಕಾಗಿದೆ. ಜಿಲ್ಲೆಯಲ್ಲಿನ ನಾಗಾಲಾಪುರ ಮಠ ಮಹಾಸಂಸ್ಥಾನ ಹಾಗೂ ಮಾಲ್ಲೂರಿನ ಬೆಳ್ಳಾವಿ ಮಠಗಳು ರೇಣುಕಾಚಾರ್ಯರ ಜಯಂತಿಯನ್ನು ಹಿಂದಿನಿಂದಲೂ ಆಚರಿಸುತ್ತಾ ಬರುತ್ತಿದ್ದು ಈಗಾ ಸರ್ಕಾರ ಮಟ್ಟದಲ್ಲಿ ಘೋಷಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.

ಶರಣೆಯರ ಬಳಗದ ವಿಮಲ ಬೈಲಪ್ಪ ಮಾತನಾಡಿ ಸರ್ಕಾರವು ಇಂಥ ಮಹನೀಯರ ಜಯಂತಿಯನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗಳಿಗೆ ಅರಿವು ಮೂಡಿಸುವ ಅವಕಾಶ ಕಲ್ಪಿಸಿದೆ ಅದರೆ ಸಮುದಾಯದ ಸಂಘಟನೆಗಳು ಸಮರ್ಪಕವಾಗಿ ಸದ್ಬಳಿಸಿ ಕೊಳ್ಳುವಂತಾಗ ಬೇಕೆಂದರು.

ಈ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾಡಳಿತವು ನಡೆಸುವ ಪೂರ್ವಭಾವಿ ಸಭೆಗೆ ಸಮುದಾಯದ ಸಂಘಟನೆಗಳನ್ನು ಹಾಗೂ ಮುಖಂಡರಿಗೆ ಸಮರ್ಪಕವಾದ ಮಾಹಿತಿ ನೀಡಿದಲ್ಲಿ ಸಭೆಗೆ ಹಾಜರಾಗಿ ಕಾರ್ಯಕ್ರಮದ ಯಶಸ್ವಿಗೆ ಕೈ ಜೋಡಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಾದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪೂರ್ವ ಭಾವಿ ಸಭೆಗೆ ಸಮರ್ಪಕವಾಗಿ ಮಾಹಿತಿ ಒದಗಿಸುವ ಕೆಲಸವನ್ನು ನಿರ್ವಹಿಸುವ ಬೇಕೆಂದು ಮನವಿ ಮಾಡಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಆರ್. ಜ್ಞಾನಮೂರ್ತಿ ಅವರು ಮಾತನಾಡಿ ನೆರೆಯ ಆಂದ್ರ ಪ್ರದೇಶದಲ್ಲಿ ಶ್ರೀ ಸೋಮೇಶ್ವರ ಸ್ವಾಮಿಯಿಂದ ಉದ್ಬವರಾದ ರೇಣುಕಾಚಾರ್ಯರವರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಮಠದಲ್ಲಿ ಶ್ರೀ ವೀರಶೈವ ಧರ್ಮವನ್ನು ಸಂಸ್ಥಾಪಿಸಿದರು. ದೇಶದ ವಿವಿಧಡೆ ಸೇರಿದಂತೆ ಪಂಚ ಪೀಠಗಳನ್ನು ಸ್ಥಾಪಿಸಿದರು. ಇವರು ರಚಿಸಿ ಸಂಸ್ಕೃತದ ಸಂದೇಶಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಭಕ್ತ ಮಂಡಳಿಯ ಉಪಾಧ್ಯಕ್ಷ ಕೆ.ಬಿ.ಬೈಲಪ್ಪ, ಶ್ರೀ ಶರಣ ಸಾಹಿತ್ಯ ಪರಿಷತ್ನ ಬಿ.ಸುರೇಶ್, ಬಂಗಾರಪೇಟೆಯ ಚಂದ್ರಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗ ಒಡೆಯರ್ ಉಪಸ್ಥಿತರಿದ್ದರು,

ಪ್ರಾರ್ಥನೆ ಶರಣೆಯರ ಬಳಗ, ನಿರೂಪಣೆ ಕೊಂಡರಾಜನಹಳ್ಳಿ ಮಂಜುಳ, ನಾಡಗೀತೆ ಸುನೀಲ್, ಸ್ವಾಗತ ಮತ್ತು ವಂದನಾರ್ಪಣೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ರವರಿಂದ ನೆರವೇರಿತು.

ಚಿತ್ರ ; ಕೋಲಾರ ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ತೇಜೇಶಲಿಂಗ ಶಿವಾಚಾರ್ಯ ಮಾತನಾಡಿದರು

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande