ನವದೆಹಲಿ, 05 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜನರ ಕನಸುಗಳ ವ್ಯಾಪಾರಿ ಎಂದು ಬಿಜೆಪಿ ಸಂಸದ ಮನೋಜ ತಿವಾರಿ ಹೇಳಿದ್ದಾರೆ.
ದೆಹಲಿಯಲ್ಲಿ ಎರಡು ಬಾರಿ ಆಮ್ ಆದ್ಮಿ ಪಕ್ಷ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸಿತು ಆದರೆ ಆಗಲೂ ದೆಹಲಿಗೆ ಸಮಸ್ಯೆಗಳು ಮತ್ತು ಭ್ರಷ್ಟ ನಾಯಕರು ಮಾತ್ರ ಇದ್ದರು ಎಂದಿರುವ ಅವರು
ದೆಹಲಿ ಜನರ ಕನಸುಗಳು ಯಮುನಾ ನದಿಯಲ್ಲಿ ಮುಳುಗಿಹೋದವು. ದೆಹಲಿಯ ಜನರು ಕೇಜ್ರಿವಾಲ್ ತಂಡದಿಂದ ಬೇಸತ್ತಿದ್ದಾರೆ ಎಂದಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿ ಜನತೆ ಬಿಜೆಪಿ ಸರ್ಕಾರವನ್ನು ಬಯಸಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa