ಕೊಪ್ಪಳ, 12 ಫೆಬ್ರವರಿ (ಹಿ.ಸ.)
ಆ್ಯಂಕರ್ : ಖಾಸಗಿ ಉಕ್ಕು ಕಂಪನಿಯೊಂದು ರಾಜ್ಯ ಸರಕಾರದ ಜೊತೆಗೆ 54,000 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಹಿ ಹಾಕಿರುವುದಕ್ಕೆ ಜೆ ಡಿ (ಎಸ್) ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯ ಕೈಗಾರಿಕಾ ಘಟಕಗಳು ಸ್ಥಾಪನೆಯಾಗಿ ಸಮುದಾಯದ ಮೇಲೆ ದುಷ್ಪರಿಣಾಮ ಪರಿಣಾಮ ಬೀರಿವೆ. ಕಳೆದ ಕೆಲವು ವರ್ಷಗಳಲ್ಲಿ ಅನೇಕ ಪ್ರತಿಭಟನೆಗಳು ನಡೆದಿವೆ. ಈ ಕೈಗಾರಿಕಾ ಘಟಕಗಳು ಕಾನೂನನ್ನು ಗಾಳಿಗೆ ತೂರಿ ಸಮುದಾಯದ ಆರೋಗ್ಯಕ್ಕೆ ದುಷ್ಪರಿಣಾಮ ಉಂಟುಮಾಡುವೆ. ಇದೀಗ ಖಾಸಗಿ ಕಂಪನಿಯೊಂದು 54,000 ಕೋಟಿ ವೆಚ್ಚದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿಸುತ್ತಿರುವುದು ಆತಂಕಕಾರಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಿ ಹಾಕಲ್ಪಟ್ಟ ಯೋಜನೆ ಕೊಪ್ಪಳ ಪಟ್ಟಣವನ್ನು ನರಕವನ್ನಾಗಿಸುವ ಸಾಧ್ಯತೆ ಇದೆ. ಹೀಗಾಗಿ ಕರ್ನಾಟಕ ರಾಜ್ಯ ಸರಕಾರ ಕೊಪ್ಪಳ ಜನರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು. ಮಂಗಳವಾರ ಈ ಯೋಜನೆಗೆ ಸರಕಾರ ಅಂಕಿತ ಹಾಕಿದೆ. ಜನರ ವಿರೋಧ ವ್ಯಕ್ತವಾದರೆ ಇದನ್ನು ಪುನರ್ ಪರಿಶೀಲಿಸಬೇಕು. ಸಮುದಾಯ ಹಾಗೂ ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ಹೊಣೆ ಸರಕಾರದ್ದು. ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇನೆ ಇಂದು ಅವರ ತಿಳಿಸಿದ್ದಾರೆ.
ಯೋಜನೆಯ ಸಾಧಕ ಬಾಧಕ ಹಾಗೂ ಕೊಪ್ಪಳದ ಜನರ ಭಾವನೆಗಳ ಕುರಿತಾಗಿ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆಗೆ ಚರ್ಚೆ ಮಾಡುವುದಾಗಿ ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್