ಕೋಲಾರ, ೧೨ ಫೆಬ್ರವರಿ (ಹಿ.ಸ.) :
ಆ್ಯಂಕರ್ : ಮಾಲೂರು ತಾಲ್ಲೂಕಿನಾದ್ಯಂತ ಮುಖ್ಯ ರಸ್ತೆಗಳು ಹಾಳಾಗಿದ್ದು ಕೂಡಲೇ ರಸ್ತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣ ತಾಲ್ಲೂಕು ಅಧ್ಯಕ್ಷ ಶಿವಾರನಾರಾಯಣಸ್ವಾಮಿ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ರಾಜ್ ಗೋಪಾಲ್ರವರಿಗೆ ಮನವಿ ಸಲ್ಲಿಸಿದರು.
ಮಾಲೂರು ತಾಲ್ಲೂಕಿನ ಮುಖ್ಯ ರಸ್ತೆಗಳು ಹಳ್ಳಿಕೊಳ್ಳಗಳಿಂದ ಕೂಡಿದ್ದು ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದ್ದು. ಮಾಲೂರು ಪಟ್ಟಣದಲ್ಲಿರುವ ಬಾಲಾಜಿ ವೃತ್ತ ಮತ್ತು ರೈಲ್ವೆ ಸೇತುವೆ ಬಳಿ ಮೊಣಕಾಲಿನಷ್ಟು ಗುಂಡಿಗಳು ಇದ್ದು ವಾಹನ ಸವಾರರು ಕೆಳಗಡೆ ಬಿದ್ದು ಗಂಭೀರ ಅಪಘಾತಗಳಾಗಿವೆ. ಭಾರಿ ವಾಹನಗಳ ಚಾಲಕರಿಗೂ ಚಾಲನೆಯಲ್ಲಿ ನಿಯಂತ್ರಣ ತಪ್ಪಿ ಆಪಘಾತಗಳಿಗೆ ಕಾರಣಗಳಾಗುತ್ತಿದೆ. ಇದಕ್ಕೆ ಮೂಲ ಲೋಕೋಪಯೋಗಿ ಇಲಾಖೆ ಅಧಿಕಾರಗಳ ನಿರ್ಲಕ್ಷವೇ ಕಾರಣ ಎಂದು ದೂರಿದ್ದಾರೆ.
ಮಾಲೂರಿನ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನಕ್ಕೆ ತೆಗೆದುಕೊಂಡು ರಸ್ತೆಗಳ ಅವ್ಯವಸ್ಥೆ ಸರಿ ಪಡಿಸಿ ಸುಗಮ ಸಙಚಾರಕ್ಕೆ ಅನುಕೂಲಮಾಡಿ ಕೊಟ್ಟು ಅತೀ ಶೀಘ್ರದಲ್ಲಿಯೇ ಈ ರಸ್ತೆಗಳಿಗೆ ಒಳ್ಳೆ ಗುಣಮಟ್ಟದ ಡಾಂಬರು ಹಾಕಿಸಿ ರಸ್ತೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆಗುತ್ತಿರುವ ಅಪಘಾತಗಳನ್ನು ತಡೆಗಟ್ಟುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಅಮರಾವತಿ. ಎನ್ ದಯಾನಂದ. ಕೊಪ್ಪ ಚಂದೃ ಎಂ ಎಸ್ ಮಣಿ. ಚಿರಂಜೀವಿ, ನರೇಶ್. ಮಿಥುನ್. ನವೀನ್. ಬಿಎಸ್ ಮಂಜುನಾಥ್. ಶಿವಕುಮಾರ್, ವೆಂಕಟೇಶ್, ಅಮರನಾಥ ಪೂಜಾರಿ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಚಿತ್ರ: ಮಾಲೂರು ತಾಲ್ಲೂಕಿನ ಹಾಳಾಗಿರುವ ರಸ್ತೆಗಳನ್ನು ದುರಸ್ಥಿ ಮಾಡುವಂತೆ ಒತ್ತಾಯಿಸಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣ ತಾಲ್ಲೂಕು ಘಟಕದಿಂದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್