ಕೋಲಾರ, ೧೨ ಫೆಬ್ರವರಿ (ಹಿ.ಸ.) :
ಆ್ಯಂಕರ್ : ಯಲಬುರ್ಗಿ ರಸ್ತೆಯನ್ನು ನ್ಯಾಷನಲ್ ಹೈವೇರವರು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಇದರಿಂದಾಗಿ ಕಾರಹಳ್ಳಿಯಿಂದ ಯಲಬುರ್ಗಿ ತನಕ ರಸ್ತೆ ಅಭಿವೃದ್ಧಿಪಡಿಸಲು ಹಣ ಮಂಜೂರು ಮಾಡಿದ್ದೇನೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು.
ಬಂಗಾರಪೇಟೆ ತಾಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿರುವ ಬಿ ಶ್ರೀನಿವಾಸ್ರವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿ ಮಾತನಾಡಿದರು. ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಿಸಲು ದಾನಿಗಳು ನೀಡಿದಂತಹ ಸ್ಥಳದಲ್ಲಿ ೪೦ ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗುವುದು ಕೇವಲ ೮ ತಿಂಗಳಲ್ಲಿ ಅಧ್ಯಕ್ಷರು ಆ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಬೇಕು ಎಂದು ಹೇಳಿದರು.
ಪಂಚಾಯತಿಯ ಅನೇಕ ಗ್ರಾಮಗಳು ಅಭಿವೃದ್ಧಿಯಾಗಿಲ್ಲ. ಜನ್ನಗುಟ್ಟ ರಸ್ತೆಗೆ ೩೦ ಲಕ್ಷ ಹಾಗೂ ಈ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಎಲ್ಲೆಲ್ಲಿ ಸಿಮೆಂಟ್ ರಸ್ತೆ ಬಾಕಿ ಇದೆಯೋ ಎಲ್ಲಾ ಕಡೆ ರಸ್ತೆಗಳನ್ನು ಮಂಜೂರು ಮಾಡಿದ್ದೇನೆ. ಜೊತೆಗೆ ಯಲಬುರ್ಗಿಯಿಂದ ನೆರ್ನಹಳ್ಳಿ,ಐತಾಂಡಹಳ್ಳಿ ಗ್ರಾಮಗಳಿಗೆ ಹೋಗುವ ರಸ್ತೆಗೆ ೬೫ ಲಕ್ಷ ರೂಪಾಯಿ ಮಂಜೂರು ಮಾಡಿಸಲಾಗಿದೆ ಎಂದರು.
ಐತಾಂಡಹಳ್ಳಿಯಿಂದ ಛಲಗಾನಹಳ್ಳಿ, ನಾಯಕರಹಳ್ಳಿ ತನಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಒಂದು ಕೋಟಿ ೩೫ ಲಕ್ಷ ರೂಪಾಯಿ ಮಂಜೂರು ಮಾಡಿಸಲಾಗಿದೆ. ಈ ಭಾಗದಲ್ಲಿ ಒಟ್ಟಾರೆಯಾಗಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಹೇಳಿದರು.
ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನಾನು ನೀಡುತ್ತೇನೆ, ಈಗಾಗಲೇ ಕಾರಹಳ್ಳಿ ಗ್ರಾಮದ ಮತ್ತೊಂದು ವಾಟರ್ ಫಿಲ್ಟರ್ ಅನ್ನು ಮಂಜೂರು ಮಾಡಿಸಿದ್ದೇನೆ ಹಾಗೂ ಸಿಸಿ ರಸ್ತೆಯನ್ನು ಮಂಜೂರು ಮಾಡಿದ್ದೇನೆ, ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಕಿತ್ತಾಡದೆ. ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಯಲ್ಲಮ್ಮ, ಕೆಯುಡಿಎ ಅಧ್ಯಕ್ಷರಾದ ಗೋಪಾಲ ರೆಡ್ಡಿ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪಾರ್ಥಸಾರಥಿ, ಗ್ರಾಮ ಪಂಚಾಯಿತಿಯ ಸದಸ್ಯ ಚಂದ್ರಕುಮಾರ್, ಆನಂದ್, ಅಂಜಿ, ಆಭಿದ್, ಮಂಜುನಾಥ್, ರಾಮಣ್ಣ, ಲಕ್ಷ್ಮಣ್, ರಮೇಶ್, ಕಾರಹಳ್ಳಿ ಮುಖಂಡರಾದ ಮೇಸ್ತ್ರಿ ಶ್ರೀನಿವಾಸ್, ಚಿನ್ನರಾಜು, ಪಾರ್ಥಸಾರಥಿ, ರಫೀಕ್, ಜಯರಾಮ್ ಉಪಸ್ಥಿತರಿದ್ದರು.
ಚಿತ್ರ: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್