ಕೋಲಾರ, ೧೨ ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕೋಲಾರ ತಾಲೂಕಿನ ವಡಗೂರು ಗ್ರಾಮದಲ್ಲಿರುವ ಹುತ್ತೂರು ಹೋಬಳಿಯ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಬುಧವಾರ ನಡೆದು ಅಧ್ಯಕ್ಷರಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಬೆಂಬಲಿತ ಅಬ್ಬಣಿ ಶ್ರೀನಿವಾಸಪ್ಪ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಯಾರಂಘಟ್ಟ ಎಸ್ ಶಂಕರಯ್ಯ ಅವಿರೋಧವಾಗಿ ಆಯ್ಕೆಯಾದರು.
ಸಂಘದಲ್ಲಿ ಒಟ್ಟು ೧೨ ನಿರ್ದೇಶಕರಿದ್ದು ಕಾಂಗ್ರೆಸ್ ಜೆಡಿಎಸ್, ಬಿಜೆಪಿ ಮೂರು ಪಕ್ಷಗಳ ಮುಖಂಡರ ಮಾತುಕತೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರು ಮಾತ್ರವೇ ನಾಮಪತ್ರ ಸಲ್ಲಿಸಿದ್ದ ಕಾರಣದಿಂದ ಚುನಾವಣಾಧಿಕಾರಿ ಮುಸ್ತಾಕ್ ಅಹಮದ್ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಅಬ್ಬಣಿ ಶ್ರೀರಾಮಪ್ಪ ಮಾತನಾಡಿ ಮೂರು ಪಕ್ಷದ ಮುಖಂಡರ ಸಹಕಾರದಿಂದ ವಡಗೂರು ಸೊಸೈಟಿಗೆ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು ಎಲ್ಲರಿಗೂ ಧನ್ಯವಾದಗಳು ಅರ್ಪಿಸುತ್ತೇನೆ ಹೋಬಳಿಯ ರೈತರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಜೊತೆಗೆ ಎಲ್ಲಾ ನಿರ್ದೇಶಕರು ಮತ್ತು ಮಾಜಿ ಅಧ್ಯಕ್ಷರ ಸಲಹೆ ಸೂಚನೆಗಳನ್ನು ಪಡೆದು ಜಿಲ್ಲೆಯ ಮಾದರಿ ಸೊಸೈಟಿಯಾಗಿ ಮಾಡುತ್ತೇವೆ ಎಂದರು.
ನಿರ್ದೇಶಕರಾದ ಟಿಎಪಿಸಿಎಂಎಸ್ ಅಧ್ಯಕ್ಷ ವಡಗೂರು ವಿ.ರಾಮು, ವಿಟ್ಟಪ್ಪನಹಳ್ಳಿ ಕೋಟೆ ಸಿಎಂ ನಾರಾಯಣಸ್ವಾಮಿ, ವಿ.ಆರ್.ಮಂಜುನಾಥ್, ವಿ.ಆನಂದ್, ಪ್ರವೀಣ್, ಆರ್ ರಮೇಶ್ ಬಾಬು, ಎಸ್ ಕೃಷ್ಣಮೂರ್ತಿ, ವೆಂಕಟರಾಮೇಗೌಡ, ಇಂದಿರಮ್ಮ, ಸುಶೀಲಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು,
ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿಟ್ಟಪ್ಪನಹಳ್ಳಿ ಡೇರಿ ವೆಂಕಟೇಶ್, ಜೆಡಿಎಸ್ ಬಿಜೆಪಿ ಕಾಂಗ್ರೆಸ್ ಮುಖಂಡರಾದ ಕೆಂಬೋಡಿ ನಾರಾಯಣಗೌಡ, ತಂಬಿಹಳ್ಳಿ ಮುನಿಯಪ್ಪ, ಅಜ್ಜಪ್ಪನಹಳ್ಳಿ ಲಕ್ಷ್ಮೀನಾರಾಯಣ, ಸೀಸಂದ್ರ ರಮೇಶ್ ಕುಮಾರ್, ಅಬ್ಬಣಿ ನಾಗರಾಜ್,ಷಾಪೂರು ಸೋಮಣ್ಣ, ಯಾರಂಘಟ್ಟ ಮುನಿರಾಜು, ಅಬ್ಬಣಿ ಕೃಷ್ಣಪ್ಪ, ಹರಳಕುಂಟೆ ವೆಂಕಟೇಶಪ್ಪ, ರಾಮಚಂದ್ರ, ನಟರಾಜ್ ಮುಂತಾದವರು ಇದ್ದು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದನೆ ಸಲ್ಲಿಸಿದರು.
ಚಿತ್ರ: ಕೋಲಾರ ತಾಲ್ಲೂಕು ವಡಗೂರು ವ್ಯವಸಾಯ ಸೇವ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶ್ರೀನಿವಾಸಪ್ಪ, ಉಪಾಧ್ಯಕ್ಷರಾಗಿ ಶಂಕರಯ್ಯ ಅವಿರೋಧವಾಗಿ ಆಯ್ಕೆಯಾದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್