ಸಿಖ್ ವಿರೋಧಿ ದಂಗೆ : ಸಜ್ಜನ್ ಕುಮಾರ್ ದೋಷಿ
ನವದೆಹಲಿ, 12 ಫೆಬ್ರವರಿ (ಹಿ.ಸ.) : ಆ್ಯಂಕರ್ : 1984 ರ ಸಿಖ್ ವಿರೋಧಿ ದಂಗೆಯ ಸರಸ್ವತಿ ವಿಹಾರ್ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ನ್ಯಾಯಾಲಯದ ಈ ತೀರ್ಪಿನ ಬಗ್ಗೆ, ಭಾರತೀಯ ಜನತಾ ಪಕ್ಷವು ತಡವಾಗಿಯಾದರೂ
Court


ನವದೆಹಲಿ, 12 ಫೆಬ್ರವರಿ (ಹಿ.ಸ.) :

ಆ್ಯಂಕರ್ : 1984 ರ ಸಿಖ್ ವಿರೋಧಿ ದಂಗೆಯ ಸರಸ್ವತಿ ವಿಹಾರ್ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.

ನ್ಯಾಯಾಲಯದ ಈ ತೀರ್ಪಿನ ಬಗ್ಗೆ, ಭಾರತೀಯ ಜನತಾ ಪಕ್ಷವು ತಡವಾಗಿಯಾದರೂ ನ್ಯಾಯ ದೊರಕಿದೆ ಎಂದು ಹೇಳಿದೆ.

ಈ ನಿರ್ಧಾರವು ಎಲ್ಲಾ ಬಾಧಿತ ಕುಟುಂಬಗಳ ಹೋರಾಟ ಮತ್ತು ತಾಳ್ಮೆಯ ವಿಜಯವಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಹೇಳಿದ್ದಾರೆ.

ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಅವರು ಇಂದು ಪಂಜಾಬ್‌ಗೆ ಬಹಳ ಮುಖ್ಯವಾದ ದಿನವಾಗಿದೆ ಎಂದರು.

40 ವರ್ಷಗಳ ನಂತರ ದೊರೆತ ಈ ನ್ಯಾಯವು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದ ವಿಶೇಷ ಆಯೋಗದ ಫಲಿತಾಂಶವಾಗಿದೆ, ಇದು ಸಿಖ್ ಸಹೋದರರಿಗೆ ನ್ಯಾಯ ದೊರಕಿಸಿಕೊಡಲು ದಾರಿ ಮಾಡಿಕೊಟ್ಟಿತು. ಸಾವಿನ ನೃತ್ಯವನ್ನು ಸೃಷ್ಟಿಸುತ್ತಿರುವ ತಮ್ಮ ನಾಯಕರನ್ನು ರಕ್ಷಿಸಲು ಮುಂದಾಗಿದ್ದ ಕಾಂಗ್ರೆಸ್ ಕೆಲಸಕ್ಕೆ ನ್ಯಾಯಾಲಯದಿಂದ ತಕ್ಕ ಉತ್ತರ ಸಿಕ್ಕಿದೆ ಎಂದು ತರುಣ್ ಚುಗ್ ಹೇಳಿದರು.

ಸಜ್ಜನ್ ಕುಮಾರ್ ಶಿಕ್ಷೆಯ ಪ್ರಮಾಣ ಕುರಿತು ಫೆಬ್ರವರಿ 18 ರಂದು ತೀರ್ಪು ಪ್ರಕಟಿಸುವುದಾಗಿ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಆದೇಶಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande