ಕಾರ್ಖಾನೆಗಳ ಮಣ್ಣು ತಿನ್ನುತ್ತಿದ್ದೇವೆ : ಹಾಲವರ್ತಿ ಗ್ರಾಮಸ್ಥರು
ಧೂಳು
ಕಾರ್ಖಾನೆಗಳ ಮಣ್ಣು ತಿನ್ನುತ್ತಿದ್ದೇವೆ: ಹಾಲವರ್ತಿ ಗ್ರಾಮಸ್ಥರು


ಕೊಪ್ಪಳ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಲ್ದೋಟಾ ಎಂ.ಎಸ್.ಪಿ.ಎಲ್. ಘಟಕ ನಮ್ಮ ಗ್ರಾಮದ ಪಕ್ಕದಲ್ಲಿದ್ದು, ಶಾಲೆಗೂ ಸೇರಿ ಮನೆಗಳಲ್ಲಿ ದೊಡ್ಡ ಪ್ರಮಾಣದ ಧೂಳು ಬಂದು ಬೀಳುತ್ತದೆ. ಈ ಧೂಳು ತಿಂದ ಮನುಷ್ಯರು, ದನ ಕರುಗಳು ರೋಗಪೀಡಿತರಾಗಿ ಸಾಯುತ್ತಿದ್ದೇವೆ. ಕೆರೆಯ ನೀರು ಸಹಿತ ಕುಡಿಯಲು ಆಗುತ್ತಿಲ್ಲ ಎಂದು ಹಾಲವರ್ತಿ ಗ್ರಾಮದ ಬಾಧಿತ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

ಕೊಪ್ಪಳ ನಗರಸಭೆ ಮುಂದೆ ಬಲ್ದೋಟ ಬಿಎಸ್ಪಿಎಲ್ ಕಲ್ಯಾಣಿ ಸ್ಟೀಲ್ ಮುಕುಂದ ಸುಮಿ, ಎಕ್ಸ್ ಇಂಡಿಯಾ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಬಸಾಪುರ ಕೆರೆ ಸಾರ್ವಜನಿಕರಿಗೆ ಆಗ್ರಹಿಸಿ ಕೊಪ್ಪಳ ಜಿಲ್ಲಾ ಬಚಾವಂದೋಲನ ಸಮಿತಿ ಹಾಗೂ ಪರಿಸರ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಹಮ್ಮಿಕೊಂಡಿರುವ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ಕ.ರ.ವೇ. ಕನ್ನಡ ಸೇನೆ ರಾಜ್ಯ ಕಾರ್ಯಾಧ್ಯಕ್ಷರಾ ಉಮೇಶಗೌಡ ಅರಳಹಳ್ಳಿ ಬೆಂಬಲ ಸೂಚಿಸಿ ಮಾತನಾಡಿ, ತುಂಗಭದ್ರಾ ಜಲಾಶಯಕ್ಕೆ ಬಾಧನೆ ಉಂಟು ಮಾಡಿರುವ ಈ ಕಾರ್ಖಾನೆಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ. ಗಂಗಾವತಿ, ಸಿಂಧನೂರು, ರಾಯಚೂರು ಮತ್ತು ಬಲಭಾಗದಲ್ಲಿ ವಿಜಯನಗರ, ಬಳ್ಳಾರಿ ಜಿಲ್ಲೆಗಳ ಜನರಿಗೆ ಕಾರ್ಖಾನೆಗಳ ಕಾರಣಕ್ಕೆ ಒಂದು ಬೆಳೆಗೆ ನೀರು ಸಿಗುವಂತೆ ಆಗಿದೆ. ಈ ಕಾರ್ಖಾನೆಗಳನ್ನು ಬಂದ್ ಮಾಡುವವರೆಗೆ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.

ಧರಣಿಯಲ್ಲಿ ಕ.ರ.ವೇ. ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ಬಿಟಿ ಮಂಜುನಾಥ, ಅಮರೇಶ್ ಹೇರೂರು, ಹೋರಾಟ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಗೋನಾಳ, ಖಾಜಾಸಾಬ್, ರಫಿ ಕುನ್ನಟಗಿ, ಈರಪ್ಪ ಹೊಸಮನಿ, ಮಂಜಪ್ಪ ನಡಲಮನಿ, ಬಸವರಾಜ ಹಾಲವರ್ತಿ, ಗವಿಸಿದ್ದಪ್ಪ ಹಲಿಗಿ, ಡಿ.ಎಚ್. ಪೂಜಾರ, ಎಲ್ಲಮ್ಮ, ಹುಲಿಗೆಮ್ಮ, ಗುಂಡಮ್ಮ, ಗಾಳಮ್ಮ, ಜಗದೀಶ ಎಸ್ ವಿ ರಾಜೂರ ಚೆಂಬುಲಿಂಗಪ್ಪ ಹಲಗೇರಿ, ಎ.ಎಂ. ಮದರಿ, ಜಂಬಣ್ಣ, ಎಸ್ ಮಹದೇವಪ್ಪ, ಮಹಾದೇವಪ್ಪ ಸೋಂಪುರ, ಗಾಳೆಪ್ಪ ಮುಂಗೋಲಿ, ಬಿ.ಸಿ. ಕರಿಗಾರ್, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಬಸವರಾಜ ಶೀಲವಂತರ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande