ವಿದ್ಯಾರ್ಥಿನಿಯರಿಗೆ ರೋಟರಿ ಕ್ಲಬ್‌ನಿಂದ ಸೈಕಲ್ ವಿತರಣೆ
ವಿದ್ಯಾರ್ಥಿನಿಯರಿಗೆ ರೋಟರಿ ಕ್ಲಬ್‌ನಿಂದ ಸೈಕಲ್ ವಿತರಣೆ
ಕೋಲಾರ ತಾಲ್ಲೂಕಿನ ಯಲವಾರ ಗ್ರಾಮದಲ್ಲಿ ರೋಟರಿ ಕ್ಲಬ್‌ನಿಂದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಯಿತು.


ಕೋಲಾರ, 0೬ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಹೆಣ್ಣುಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಡಯಟ್ ನಿವೃತ್ತ ಹಿರಿಯ ಉಪನ್ಯಾಸಕ ಸಿ. ಆರ್. ಅಶೋಕ್ ಹೇಳಿದರು.

ಕೋಲಾರ ತಾಲೂಕಿನ ಯಲವಾರ ಗ್ರಾಮದಲ್ಲಿ ರೋಟರಿ ಕ್ಲಬ್ ಕೋಲಾರ ಹಾಗೂ ರೋಟರಿ ಲೇಕ್ ಸೈಡ್ ಬೆಂಗಳೂರು ಸಂಸ್ಥೆಯ ಸಹಯೋಗದಲ್ಲಿ ೮ನೇ ತರಗತಿಯ ವಿದ್ಯಾರ್ಥಿನಿಯರಿಗೆ ೫ ಉಚಿತ ಬೈಸಿಕಲ್ ವಿತರಿಸಿ ಮಾತನಾಡಿ, ಸಂಘ ಸಂಸ್ಥೆಗಳು ಹಾಗೂ ಸರಕಾರಗಳು ವಿವಿಧ ಯೋಜನೆಗಳನ್ನು ನೀಡಿದ್ದು, ಪೋಷಕರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಡ್ಡಾಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಪೋಷಕರು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಅಸ್ತ್ರವಾಗಿ ನೀಡಿದರೆ, ಸಮಾಜ ಹಾಗೂ ಕುಟುಂಬವೂ ನಾನಾ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯೂ ಸಮಾಜದಲ್ಲಿ ಶಿಕ್ಷಣ ಹಾಗೂ ಅರೋಗ್ಯ ಕ್ಷೇತ್ರಗಳಿಗೆ ಇಂದಿಗೂ ಸಹ ವಿವಿಧ ಯೋಜನೆ ಗಳನ್ನು ನೀಡುವ ಮೂಲಕ ಸಾಗುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊ ಳ್ಳಬೇಕು ಎಂದು ಮನವಿ ಮಾಡಿದರು.

ಡಿಸೆಂಬರ್ ತಿಂಗಳಿAದ ಕೇಂದ್ರ ಸರಕಾರದಿಂದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಮನೆ ಬಾಗಿಲಿಗೆ ಬಂದು ನೀಡಲಿದ್ದು, ಪೋಷಕರು ಜಾಗೃತರಾಗಿ ಮಕ್ಕಳ ಹಿತಕ್ಕಾಗಿ ಲಸಿಕೆಯನ್ನು ಕಡ್ಡಾಯ ಹಾಕಿ ಅರೋಗ್ಯ ವಂತ ಮಗುವಾಗಿ ಮಾಡಬೇಕು ಎಂದು ಮನವಿ ಮಾಡಿದರು.

ನಿವೃತ್ತ ಕೆ.ಎಸ್.ಆರ್.ಟಿ.ಸಿ ವೈ.ವಿ. ರಮೇಶ್ ಕುಮಾರ್ ಮಾತನಾಡಿ, ಜಿಲ್ಲಾ ರೋಟರಿ ಕ್ಲಬ್ ನಿಂದ ಸರಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ರಂಗದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ರೋಟರಿ ಸಂಸ್ಥೆ ಹೆಚ್ಚು ಸಹಕಾರಿ ಯಾಗುತ್ತಿದೆ ಎಂದರು.

ಸರಕಾರಿ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿನಿಯರಾದ ಯಲವಾರ ಗ್ರಾಮದ ಟಿ. ಗೌತಮಿ, ವೈ.ವಿ. ಅನುಶ್ರೀ, ವೈ. ಆರ್. ತ್ರಿವೇಣಿ, ವಿ. ಸಂಜನಾ, ಎಂ. ಸುಸ್ಮಿತಾ ರಿಗೆ ಉಚಿತ ಬೈಸಿಕಲ್ ಸೌಲಭ್ಯವನ್ನು ಜಿಲ್ಲಾ ರೋಟರಿ ಸಂಸ್ಥೆಯಿ0ದ ಪಡೆದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಾಜ್ಕುಮಾರ್, ಜಿಲ್ಲಾ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್, ಪ್ರಗತಿ ಆಗ್ರೋ ಸರ್ವಿಸಸ್ನ ದೇವರಾಜ್, ಬಿ.ಕೆ ನಾಗರಾಜ್, ಇಸ್ರೋ ಶಂಕರಪ್ಪ, ನಿವೃತ್ತ ಕೆ.ಎಸ್.ಆರ್.ಟಿ.ಸಿ ಎಚ್.ಎಮ್ ಶ್ರೀನಿವಾಸ್, ನಿವೃತ್ತ ಕೆಎಸ್ ಆರ್.ಟಿ.ಸಿ ಲಕ್ಷ್ಮಿನಾರಾಯಣಸ್ವಾಮಿಗೌಡ, ಬೈಚಪ್ಪ, ಪ್ರಗತಿಪರ ರೈತರಾದ ಗೋವಿಂದಪ್ಪ, ತೂರಾಂಡಹಳ್ಳಿ ರವಿ, ನಾಗೇಶ್, ಗ್ರಾಮಪಂ ಸದಸ್ಯರಾದ ಶೈಲಜಾ, ಭವ್ಯ, ವೆಂಕಟೇಶಪ್ಪ ಭಾಗಿಯಾಗಿದ್ದರು.

ಚಿತ್ರ : ಕೋಲಾರ ತಾಲ್ಲೂಕಿನ ಯಲವಾರ ಗ್ರಾಮದಲ್ಲಿ ರೋಟರಿ ಕ್ಲಬ್‌ನಿಂದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande