
ನವದೆಹಲಿ, 29 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ನೌಕಾಪಡೆಯ ನೌಕಾಯಾನ ಹಡಗು ಐಎನ್‌ಎಸ್‌ವಿ ಕೌಂಡಿನ್ಯಾ ತನ್ನ ಚೊಚ್ಚಲ ಸಮುದ್ರಯಾನವನ್ನು ಆರಂಭಿಸಿರುವುದು ದೇಶದ ಪ್ರಾಚೀನ ಹಾಗೂ ಶ್ರೀಮಂತ ಕಡಲ ಪರಂಪರೆಯ ಜೀವಂತ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್‌ನ ಪೋರ್ಬಂದರ್‌ನಿಂದ ಓಮನ್‌ನ ಮಸ್ಕತ್‌ಗೆ ಹಡಗು ತನ್ನ ಮೊದಲ ಪ್ರಯಾಣವನ್ನು ಆರಂಭಿಸಿರುವುದನ್ನು ಕಂಡು ಅಪಾರ ಸಂತೋಷವಾಗಿದೆ ಎಂದು ಪ್ರಧಾನಿ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಪ್ರಾಚೀನ ಭಾರತೀಯ ‘ಹೊಲಿಗೆ ಹಡಗು’ ತಂತ್ರವನ್ನು ಬಳಸಿ ನಿರ್ಮಿಸಲಾದ ಈ ನೌಕೆ, ಭಾರತದ ಸಾವಿರಾರು ವರ್ಷಗಳ ಕಡಲ ಸಂಪ್ರದಾಯ ಮತ್ತು ತಾಂತ್ರಿಕ ಜ್ಞಾನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಈ ವಿಶಿಷ್ಟ ಯೋಜನೆಯನ್ನು ಯಶಸ್ವಿಯಾಗಿ ಸಾಕಾರಗೊಳಿಸಿದ ವಿನ್ಯಾಸಕರು, ಕುಶಲಕರ್ಮಿಗಳು, ಹಡಗು ನಿರ್ಮಾಣಕಾರರು ಹಾಗೂ ಭಾರತೀಯ ನೌಕಾಪಡೆಯ ಸಂಪೂರ್ಣ ತಂಡವನ್ನು ಪ್ರಧಾನಿ ಅಭಿನಂದಿಸಿದ್ದು, ಅವರ ಸಮರ್ಪಣೆ ಮತ್ತು ಪರಿಶ್ರಮವೇ ಈ ಐತಿಹಾಸಿಕ ಹಡಗು ರೂಪುಗೊಳ್ಳಲು ಕಾರಣವಾಗಿದೆ ಎಂದು ಮೋದಿ ಶ್ಲಾಘಿಸಿದ್ದಾರೆ. ಜೊತೆಗೆ, ಹಡಗಿನ ಸಿಬ್ಬಂದಿಗೆ ಸುರಕ್ಷಿತ ಮತ್ತು ಸ್ಮರಣೀಯ ಸಮುದ್ರಯಾನಕ್ಕೆ ಶುಭ ಹಾರೈಕೆಯನ್ನು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa