ದೆಹಲಿ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ
ನವದೆಹಲಿ, 26 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ವಾಯುಮಾಲಿನ್ಯ ಸಮಸ್ಯೆಗೆ ಇನ್ನೂ ಯಾವುದೇ ಪರಿಹಾರ ಕಂಡು ಬಂದಿಲ್ಲ. ಶುಕ್ರವಾರ ಸಂಜೆ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 332ಕ್ಕೆ ದಾಖಲಾಗಿದ್ದು, ಇದನ್ನು ‘ಅತ್ಯಂತ ಕಳಪೆ’ ವರ್ಗಕ್ಕೆ ಸೇರಿಸಲಾಗಿದೆ ಎಂದು ಕೇಂದ್
Delhi aqi


ನವದೆಹಲಿ, 26 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ವಾಯುಮಾಲಿನ್ಯ ಸಮಸ್ಯೆಗೆ ಇನ್ನೂ ಯಾವುದೇ ಪರಿಹಾರ ಕಂಡು ಬಂದಿಲ್ಲ. ಶುಕ್ರವಾರ ಸಂಜೆ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 332ಕ್ಕೆ ದಾಖಲಾಗಿದ್ದು, ಇದನ್ನು ‘ಅತ್ಯಂತ ಕಳಪೆ’ ವರ್ಗಕ್ಕೆ ಸೇರಿಸಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಎನ್‌ಸಿಆರ್‌ನ ಇತರ ನಗರಗಳಲ್ಲೂ ಮಾಲಿನ್ಯ ಗಂಭೀರ ಮಟ್ಟದಲ್ಲಿದ್ದು, ಗ್ರೇಟರ್ ನೋಯ್ಡಾದಲ್ಲಿ AQI 394, ಗಾಜಿಯಾಬಾದ್‌ನಲ್ಲಿ 382, ನೋಯ್ಡಾದಲ್ಲಿ 376 ಹಾಗೂ ಗುರುಗ್ರಾಮ್‌ನಲ್ಲಿ 312 ದಾಖಲಾಗಿದೆ. ಈ ಎಲ್ಲ ಪ್ರದೇಶಗಳೂ ‘ತುಂಬಾ ಕಳಪೆ’ ವರ್ಗದಲ್ಲಿವೆ.

ದೆಹಲಿಯ ಪ್ರದೇಶಗಳಲ್ಲಿನ ಎಕ್ಯೂಐ ಸ್ಥಿತಿ ಇನ್ನಷ್ಟು ಆತಂಕಕಾರಿ ಚಿತ್ರಣ ನೀಡಿದೆ. ಆನಂದ್ ವಿಹಾರ್‌ನಲ್ಲಿ 404, ಚಾಂದನಿ ಚೌಕ್‌ನಲ್ಲಿ 374, ಬುರಾರಿ ಕ್ರಾಸಿಂಗ್‌ನಲ್ಲಿ 360, ಸಿರಿ ಫೋರ್ಟ್‌ನಲ್ಲಿ 332, ಐಟಿಒದಲ್ಲಿ 348, ಪುಸಾ ಡಿಪಿಸಿಸಿ ಕೇಂದ್ರದಲ್ಲಿ 305, ಆರ್‌ಕೆ ಪುರಂನಲ್ಲಿ 345 ಹಾಗೂ ವಜೀರ್‌ಪುರ್‌ನಲ್ಲಿ 376 ಎಕ್ಯೂಐ ದಾಖಲಾಗಿದೆ.

ಇನ್ನೂ ಕೆಲವು ಪ್ರದೇಶಗಳಲ್ಲಿ 300ಕ್ಕಿಂತ ಕಡಿಮೆ ಎಕ್ಯೂಐ ದಾಖಲಾಗಿದ್ದರೂ, ಅವುಗಳು ಸಹ ‘ಕಳಪೆ’ ವರ್ಗದಲ್ಲೇ ಉಳಿದಿವೆ. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ 299, ಶ್ರೀ ಅರಬಿಂದೋ ಮಾರ್ಗದಲ್ಲಿ 289, ಐಐಟಿಯಲ್ಲಿ 267, ಐಜಿಐ ವಿಮಾನ ನಿಲ್ದಾಣ (ಟಿ-3)ನಲ್ಲಿ 245, ಅಯಾ ನಗರದಲ್ಲಿ 242, ಲೋಧಿ ರಸ್ತೆ–ಐಎಂಡಿಯಲ್ಲಿ 239 ಹಾಗೂ ನಜಾಫ್‌ಗಢದಲ್ಲಿ 235 ಎಕ್ಯೂಐ ದಾಖಲಾಗಿದೆ.

ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಶನಿವಾರವೂ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಬೆಳಗಿನ ಸಮಯದಲ್ಲಿ ಕೆಲವೆಡೆ ದಟ್ಟ ಮಂಜು ಹಾಗೂ ಇನ್ನೂ ಕೆಲ ಪ್ರದೇಶಗಳಲ್ಲಿ ಮಧ್ಯಮ ಮಂಜು ಬೀಳುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 21–23 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 6–8 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುವುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳಗಿನ ನಿಧಾನಗತಿಯ ಗಾಳಿ ಮಧ್ಯಾಹ್ನದ ವೇಳೆಗೆ ಪಶ್ಚಿಮದಿಂದ ವಾಯುವ್ಯ ದಿಕ್ಕಿಗೆ ತಿರುಗಿ, ಗಾಳಿಯ ವೇಗ ಗಂಟೆಗೆ 5 ಕಿ.ಮೀ.ಯಿಂದ 15 ಕಿ.ಮೀ.ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ.

ಇದೇ ವೇಳೆ, ಡಿಸೆಂಬರ್ 26ರಿಂದ 28ರವರೆಗೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ಚಳಿಗಾಲದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪೂರ್ವ ಹಾಗೂ ಪಶ್ಚಿಮ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಉತ್ತರಾಖಂಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಶೀತದ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande