ದಶಕದಲ್ಲೇ ರಫ್ತು ದಾಖಲೆ ಬರೆದ ಭಾರತ
ಯುಎಸ್, ಯುಎಇ, ಚೀನಾದಂತಹ ಪ್ರಮುಖ ಮಾರುಕಟ್ಟೆಗಳಲ್ಲೂ ಲಗ್ಗೆಯಿಟ್ಟ ಭಾರತೀಯ ಉತ್ಪನ್ನಗಳು
Export


ಬೆಂಗಳೂರು, 23 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ಆತ್ಮನಿರ್ಭರ ಭಾರತ ಇದೀಗ 'ಆಮದು'ದಿಂದ ಇಳಿದು ದಿನೇ ದಿನೇ ರಫ್ತಿನಲ್ಲಿ ದಾಖಲೆ ಬರೆಯುತ್ತಿದೆ. ನವೆಂಬರ್ ತಿಂಗಳಲ್ಲಿ ಒಂದು ದಶಕದಲ್ಲೇ ಅತ್ಯಧಿಕ ರಫ್ತು ದಾಖಲಿಸಿದೆ.

ಯುಎಸ್, ಯುಎಇ ಮತ್ತು ಚೀನಾದಂತಹ ಪ್ರಮುಖ ರಾಷ್ಟ್ರಗಳಿಗೂ ಭಾರತೀಯ ಉತ್ಪನ್ನಗಳ ಸಾಗಣೆ ಹೆಚ್ಚಳ ರಫ್ತು ವಲಯಕ್ಕೆ ಪ್ರೇರಣೆ ನೀಡಿದೆ. ಪರಿಣಾಮ ಆಮದು-ರಫ್ತು ನಡುವಿನ ಅಂತರ ನವೆಂಬರ್‌ನಲ್ಲಿ $24.53 ಬಿಲಿಯನ್‌ಗೆ ಕಡಿಮೆಯಾಗಿದೆ. ಅಕ್ಟೋಬರ್‌ನಲ್ಲಿ $41.68 ಬಿಲಿಯನ್‌ನಿಂದ ತೀವ್ರ ಸುಧಾರಣೆ ಕಂಡಿದೆ.

ರಪ್ಟು ಏರಿಕೆಯಲ್ಲಿ ಏಕೈಕ ದೊಡ್ಡ ಮಟ್ಟದಲ್ಲಿ ಇರುವುದು ಎಂಜಿನಿಯರಿಂಗ್ ಸರಕುಗಳು. ನವೆಂಬರ್ ಲ್ಲಿ ಇದು $11.01 ಬಿಲಿಯನ್‌ಗೆ ಏರಿದ್ದು, ವರ್ಷದ ಹಿಂದಿನ 58.9 ಬಿಲಿಯನ್‌ ಅನ್ನು ಮೀರಿದೆ. ಯಂತ್ರೋಪಕರಣ, ಸಾರಿಗೆ ಉಪಕರಣ ಮತ್ತು ಆಟೋ ಘಟಕಗಳಿಗೆ ನಿರಂತರ ವಿದೇಶಿ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.

ಎಲೆಕ್ಟ್ರಾನಿಕ್ ಸರಕುಗಳು ಅತ್ಯಂತ ತೀಕ್ಷ್ಣ ಜಿಗಿತವನ್ನು ದಾಖಲಿಸಿದ್ದು, ನವೆಂಬರ್ 2024 ರಲ್ಲಿ 53.46 ಬಿಲಿಯನ್‌ನಿಂದ ನವೆಂಬರ್‌ನಲ್ಲಿ $4.81 ಬಿಲಿಯನ್‌ಗೆ ಏರಿದೆ. ಭಾರತ ನವೆಂಬರ್‌ನಲ್ಲೇ ಅತ್ಯಧಿಕ ರಫ್ತುಗಳನ್ನು ದಾಖಲಿಸಿದ್ದು, ಪರಿಣಾಮ ವ್ಯಾಪಾರ ಕೊರತೆಯನ್ನು ನೀಗಿಸಿದೆ.

2024ರ ನವೆಂಬರ್ ಅಲ್ಲಿ ರತ್ನಗಳು ಮತ್ತು ಆಭರಣಗಳ ರಫ್ತು $2.07 ಬಿಲಿಯನ್‌ನಿಂದ 52.64 ಬಿಲಿಯನ್‌ಗೆ ಏರಿದರೆ, ಔಷಧಗಳು $2.16 ಬಿಲಿಯನ್‌ನಿಂದ $2.61 ಬಿಲಿಯನ್‌ಗೆ ಏರಿದ್ದು, ಸುಮಾರು $450 ಮಿಲಿಯನ್ ಲಾಭವಾಗಿದೆ. ರಾಸಾಯನಿಕಗಳು $1.98 ಬಿಲಿಯನ್ ನಿಂದ $2.34 ಬಿಲಿಯನ್ ಗೆ ಏರಿಕೆಯಾಗಿ, ಸರಿಸುಮಾರು $365 ಮಿಲಿಯನ್ ಸೇರ್ಪಡೆ ಆಗಿರುವುದನ್ನು ವಾಣಿಜ್ಯ ಸಚಿವಾಲಯದ ಅಂಕಿಅಂಶಗಳೇ ದೃಢಪಡಿಸಿವೆ.

2024ರ ನವೆಂಬರ್ ಅಲ್ಲಿ ಸರಕುಗಳ ರಫ್ತು $31.94 ಬಿಲಿಯನ್ ಆಗಿತ್ತು. ಆದರೆ ಇದೀಗ ತಿಂಗಳಿನಿಂದ ತಿಂಗಳಿಗೆ $38.13 ಬಿಲಿಯನ್‌ಗೆ ಏರುಮುಖವಾಗಿದೆ. ಅಂತೆಯೇ ಅಕ್ಟೋಬರ್ ತಿಂಗಳಲ್ಲಿ ಆಮದು $76.06 ಬಿಲಿಯನ್‌ನಿಂದ $62.66 ಬಿಲಿಯನ್‌ಗೆ ಇಳಿದು ದೇಶದ ವಾಣಿಜ್ಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಚಿನ್ನದ ಆಮದು ಹೆಚ್ಚಳ:

ಪ್ರಸ್ತುತ ಚಿನ್ನದ ಆಮದು ಮೂರು ಪಟ್ಟು ಹೆಚ್ಚಿದ್ದು, ಜಾಗತಿಕ ಅನಿಶ್ಚಿತತೆ ವೇಳೆ ವಾಣಿಜ್ಯ ವಲಯವನ್ನು ಸಮತೋಲನಗೊಳಿಸಿದೆ. ಅಲ್ಲದೇ, ವ್ಯಾಪಾರ ವೈವಿಧ್ಯೀಕರಣದಿಂದ ಭಾರತದ ರಫ್ತು ವಲಯವೂ ತುಲನಾತ್ಮಕವಾಗಿ ಹೆಚ್ಚು ಸಮತೋಲಿತವಾಗಿದೆ ಎನ್ನುತ್ತಾರೆ ಭಾರತದ ಮುಖ್ಯ ನೀತಿ ಸಲಹೆಗಾರ ಡಿ.ಕೆ. ಶ್ರೀವಾಸ್ತವ್.

ವರ್ಷದಿಂದ ವರ್ಷಕ್ಕೆ ಸರಕುಗಳ ಆಮದು $63.87 ಶತಕೋಟಿಯಿಂದ ಇಳಿಮುಖವಾಗಿದೆ. ಆಗಸ್ಟ್‌ನಲ್ಲಿ ಜಾರಿಗೆ ಬಂದ US ಭಾರೀ ಸುಂಕಗಳ ಹಿನ್ನೆಲೆಯಲ್ಲಿ ಭಾರತೀಯ ರಫ್ತುದಾರರು ಕಾರ್ಯತಂತ್ರವನ್ನೇ ಬದಲಿಸಿದ್ದಾರೆ. ಭಾರತ ಉತ್ಪಾದಿತ ಸ್ಮಾರ್ಟ್‌ಫೋನ್‌ ಮತ್ತು ಔಷಧಗಳ ರಫ್ತು ಯುಎಸ್ ಸುಂಕದ ಹೊಡೆತವನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ನವೆಂಬರ್‌ನಲ್ಲಿ ಯುಎಸ್‌ಗೆ ಎಲೆಕ್ಟ್ರಾನಿಕ್ಸ್ ಮತ್ತು ಔಷಧೀಯ ವಸ್ತುಗಳಂತಹ ಸುಂಕ-ಮುಕ್ತ ವಲಯಗಳಿಂದ ರಫ್ತು ಹೆಚ್ಚಳ ಕಂಡಿದ್ದರೆ, ರತ್ನಗಳು, ಆಭರಣಗಳು ಮತ್ತು ಸಮುದ್ರ ಉತ್ಪನ್ನಗಳಂತಹ ಸುಂಕ-ಪೀಡಿತ ಸಾಮಗ್ರಿ ಸಹ ಚೀನಾ, ಹಾಂಗ್ ಕಾಂಗ್ ಮತ್ತು ವಿಯೆಟ್ನಾಂನಂತಹ ಪರ್ಯಾಯ ಮಾರುಕಟ್ಟೆಗಳಲ್ಲಿ ಬೇಡಿಕೆ ಕಂಡುಕೊಂಡು ಭಾರತದ ರಫ್ತು ವಲಯವನ್ನು ಮತ್ತಷ್ಟು ಬಲಪಡಿಸಿದೆ. 'ಇದು ದಂಡನಾತ್ಮಕ ಸುಂಕಗಳ ಪ್ರಭಾವದ ಹೊರತಾಗಿಯೂ ಒಟ್ಟಾರೆ ರಫ್ತು ಬೆಳವಣಿಗೆಗೆ ಸಹಾಯ ಮಾಡಿದೆ' ಎನ್ನುತ್ತಾರೆ ಎಮ್ ಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಮಾಧವಿ ಅರೋರಾ.

ಭಾರತ ನವೆಂಬರ್‌ನಲ್ಲಿ ದಶಕದಲ್ಲೇ ಅತ್ಯಧಿಕ ಸರಕು ರಫ್ತುಗಳನ್ನು ದಾಖಲಿಸಿದೆ. ಅತಿ ಹೆಚ್ಚಿದ್ದ ಆಮದುವನ್ನು ಗಣನೀಯವಾಗಿ ತಗ್ಗಿಸಿದೆ. ಪೆಟ್ರೋಲಿಯಂ ವ್ಯಾಪಾರದಲ್ಲಿನ ಮಂದಗತಿಯು ಒಂದು ಕಾರಣವಾಗಿದ್ದು, ವಿಶೇಷವಾಗಿ ರಫ್ತು ವಲಯವನ್ನು ಬೆಂಬಲಿಸಿದೆ ಎನ್ನುತ್ತಾರೆ ದೆಹಲಿ ವಿಶ್ವವಿದ್ಯಾಲಯದ ವ್ಯಾಪಾರ ಅರ್ಥಶಾಸ್ತ್ರಜ್ಞ ಮತ್ತು ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಅಭಾಷ್ ಕುಮಾರ್.

ಒಟ್ಟಾರೆ ಭಾರತದ ರಫ್ತು ವಲಯವು ಬಲಿಷ್ಠಗೊಳ್ಳುತ್ತಿದ್ದು, ಹೊರ ದೇಶಿ ಉತ್ಪನ್ನಗಳ ಆಮದು ಬಹುವಾಗಿ ತಗ್ಗಿದೆ. ಕೇಂದ್ರ ಸರ್ಕಾರ ಕೈಗೊಂಡ GST ಕಡಿತ, ಉತ್ಪಾದನಾ ವಲಯಕ್ಕೆ ನೀಡಿದ ಉತ್ತೇಜನ, ರಫ್ತು ಸರಳ ನೀತಿಗಳು ಆತ್ಮನಿರ್ಭರ ಭಾರತವನ್ನು ಸಾಕಾರಗೊಳಿಸುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande