
ಹುಬ್ಬಳ್ಳಿ, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸೋಮವಾರದ ರಾಶಿ ಫಲ
*ಮೇಷರಾಶಿ.*
ಈ ದಿನ ನೀವು ಕುಟುಂಬ ಸಮೇತ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ, ಇಂದು ನೀವು ವಿಶೇಷ ಸ್ಥಾನಮಾನವನ್ನು ಪಡೆಯಬಹುದು ಇದರಿಂದ ಮಾನಸಿಕ ತೃಪ್ತಿಯನ್ನು ಪಡೆಯಬಹುದು, ನಿಮ್ಮ ನಂಬಿಕೆಯೇ ನಿಮ್ಮ ನೈತಿಕತೆಯನ್ನು ಹೆಚ್ಚಿಸುತ್ತದೆ, ಗುರು ಹಿರಿಯರ ಮುಂದೆ ಮಾತನಾಡುವಾಗ ವಾದ ಮಾಡುವುದು ಬೇಡ, ಎಲ್ಲವೂ ಉತ್ತಮವಾಗಿದ್ದರೂ ಸಹ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಸವಾಲುಗಳನ್ನು ಎದುರಿಸಬೇಕಾಗಬಹುದು, ನಿಮ್ಮ ಸಾಮರ್ಥ್ಯ ಮೀರಿ ಕೆಲಸವನ್ನು ಪೂರ್ಣಗೊಳಿಸಿದರು ಸಹ ಕೆಲವು ದೋಷಗಳು ಕಾಣಬಹುದು,
ಶಿವ ಲಿಂಗವನ್ನು ಪೂಜಿಸಿ ಹಾಗು ಈಶ್ವರನನ್ನು ಪ್ರಾರ್ಥಿಸಿ.
*ವೃಷಭರಾಶಿ.*
ನಿಮ್ಮ ಕೋಪವೂ ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಬಹುದು. ಗಂಡ ಹೆಂಡತಿಯರ ಮಧ್ಯದಲ್ಲಿ ಅಥವಾ ಬಂಧುಮಿತ್ರರೊಂದಿಗೆ ಜಗಳಗಳಾಗುವ ಸಂಭವವಿದೆ, ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಬಹಳಷ್ಟು ಪ್ರಯತ್ನ ಪಡಬೇಕಾಗಬಹುದು. ಉದ್ಯೋಗದ ವಿಚಾರದಲ್ಲಿ ನಿಮ್ಮ ಮೇಲಾಧಿಕಾರಿಗಳ ಸಹಾಯ ಮತ್ತು ಸಲಹೆ ಪಡೆದು ಕೆಲಸ ಮಾಡುವುದು ಒಳ್ಳೆಯದು. ನಿಮ್ಮ ಮುಂದಿನ ಹೊಸ ಕಾರ್ಯಾ ಆರಂಭದ ಬಗ್ಗೆ ಯಾರೊಂದಿಗೂ ಚರ್ಚಿಸಬೇಡಿ,
ಶ್ರೀ ಕೃಷ್ಣನನ್ನು ಆರಾಧಿಸಿ ಉತ್ತಮ ಫಲ ಸಿಗುವುದು.
*ಮಿಥುನ ರಾಶಿ.*
ಈ ದಿನ ನೀವು ಮಾಡುವ ಕೆಲಸ ಕಾರ್ಯಗಳು ಕೆಲವು ತೊಂದರೆಗಳಿಂದ ಕೂಡಿರಬಹುದು, ಈ ಸಮಯದಲ್ಲಿ ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲೆ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು, ಆದರೆ ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತವಾಗಿಯೂ ಬರಬಹುದು, ಹೆಣ್ಣು ಮಕ್ಕಳು ಅಪರಿಚಿತ ರೋಡನೆ ವ್ಯವಹರಿಸುವಾಗ ಸ್ವಲ್ಪ ಜಾಗೃತೆವಹಿಸಿ, ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ, ಯಾರಿಗೂ ಸಾಲ ನೀಡುವುದು ಬೇಡ,
ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಪೂಜಿಸಿ.
*ಕಟಕ ರಾಶಿ.*
ಈ ದಿನ ಯಾವುದೇ ರೀತಿಯ ಸವಾಲು ಮತ್ತು ಸ್ಪರ್ಧೆಗಳಿಂದ ದೂರವಿರಿ, ಇಲ್ಲವಾದರೆ ಸೋಲನ್ನು ಅನುಭವಿಸಬೇಕಾಗುವುದು. ಬಂಧು ಮಿತ್ರರು ಹಾಗು ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ನಿರ್ಮಾಣ ಕಾರ್ಯಗಳನ್ನು ಮಾಡುವವರಿಗೆ ಸ್ವಲ್ಪದರ ಮಟ್ಟಿಗೆ ಶುಭ ಫಲಗಳು ಲಭಿಸುತ್ತವೆ. ನಟನೆ, ಹಾಸ್ಯ, ಪ್ರವಾಸ, ಮತ್ತು ಔಷಧಿ ವ್ಯಾಪಾರಿಗಳಿಗೆ ತುಸು ಲಾಭದಾಯಕವಾಗಿದೆ. ಷೇರು ಮಾರುಕಟ್ಟೆಗೆ ಸಂಬಂಧಿಸಿ ವ್ಯವಹಾರದಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ,
ದುರ್ಗಾ ದೇವಿಯ ದರ್ಶನ ಮಾಡಿ ಶುಭವಾಗುದು.
*ಸಿಂಹ ರಾಶಿ.*
ಪ್ರೀತಿ ಪ್ರೇಮದ ವ್ಯವಹಾರಗಳಿಗೆ ಈ ದಿನವೂ ಸೂಕ್ತವಾಗಿದೆ. ಪಾಲುದಾರರು ಹಾಗು ಸಹೋದ್ಯೋಗಿಗಳೊಂದಿಗೆ ಯಾವುದೇ ರೀತಿಯ ಜಗಳಗಳನ್ನು ಮಾಡಿಕೊಳ್ಳಬೇಡಿ. ನಿಮ್ಮ ದೈಹಿಕ ಕಾಮನೆಗಳು ಇಂದು ಈಡೇರಲಿವೆ. ಯಾವುದಾದರು ಒಂದು ಹೊಸ ವಸ್ತುವನ್ನು ಕೊಳ್ಳುವ ಅಥವಾ ಅದಕ್ಕೆ ಹಣ ಖರ್ಚು ಮಾಡುವ ಯೋಗ ನಿಮಗಿದೆ. ಲೇಖಕರು, ಕವಿಗಳು, ಪತ್ರಿಕಾ ವರಿದಿಗಾರರಿಗೆ, ಈ ದಿನ ವಿಶೇಷವಾಗಿ ಧನ ಲಾಭವಾಗುವದಿದೆ,
ಮಿಶ್ರ ವರ್ಣದ ವಸ್ತ್ರಗಳನ್ನು ಈ ದಿನ ಧಾರಣೆ ಮಾಡುವದು ಬೇಡ.
*ಕನ್ಯಾ ರಾಶಿ.*
ಇಂದು ನಿಮ್ಮ ರಾಶಿಯವರಿಗೆ ಮಿಶ್ರ ಫಲಗಳು ಇರುತ್ತವೆ, ವ್ಯಪಾರ ವ್ಯವಹಾರ ಅಥವಾ ಕೆಲಸದ ಸ್ಥಳಗಳಲ್ಲಿ ಜಾಗುರೂಕರಾಗಿರಿ, ಉತ್ತಮ ಆಹಾರ ಸೇವನೆಯ ಕಡೆ ಗಮನ ಹರಿಸಿ ಉತ್ತಮ ಇಲ್ಲವಾದರೆ ಉದರ ಸಂಬಂದಿ ತೊಂದರೆಗಳು ಕಾಡಬಹುದು, ಬಟ್ಟೆ ವ್ಯಾಪಾರ ಮಾಡುವವರಿಗೆ ಈ ದಿನ ವಿಶೇಷವಾದ ಲಾಭವಾಗಲಿದೆ, ಬಟ್ಟೆ, ಗಣಿ ಅಥವಾ ಖನಿಜಗಳಿಗೆ ಸಂಬಂಧಿಸಿದ ಶೇರುಗಳ ಮೇಲೆ ಲಾಭ ಬರುವ ಸಾಧ್ಯತೆ ಇದೆ,
ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
*ತುಲಾ ರಾಶಿ.*
ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಹರ್ಷ ಚಿತ್ತದ ಮನಸ್ಸು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ಮಕ್ಕಳ ಆರೋಗ್ಯದ ಕಡೆ ಗಮನಹರಿಸಿ. ವಾಹನ ಚಾಲನೆ ಮಾಡುವುದು ಅಥವಾ ದೂರ ಪ್ರಯಾಣ ಮಾಡುವುದು ಸೂಕ್ತವಲ್ಲ. ಸಹೋದ್ಯೋಗಿಗಳೊಡನೆ ಮನಸ್ತಾಪ ಬರಬಹುದು ಶಾಂತ ಸ್ವಭಾವದಿಂದ ಎಲ್ಲವನ್ನು ನಿಭಾಯಿಸುವುದು ಒಳ್ಳೆಯದು. ಯಾವುದೇ ರೀತಿಯ ಹೊಸ ಕೆಲಸಗಳನ್ನು ಮಾಡುವುದು ಬೇಡ ಮುಂದೂಡುವುದು ಉತ್ತಮ. ನಿಮ್ಮ ಕುಟುಂಬದ ಜೊತೆ ಸಮಯ ಕಲಿಯುವುದು ಉತ್ತಮ,
ತಾಯಿದುರ್ಗೆಯನ್ನುಮನಸಾಸ್ಮರಿಸಿ ಶುಭವಾಗುವುದು.
*ವೃಶ್ಚಿಕ ರಾಶಿ.*
ಈ ದಿನ ನಿಮಗೆ ಶುಭ ಸುದ್ದಿಯೊಂದಿಗೆ ಆರಂಭವಾಗಲಿದೆ ನಿಮ್ಮ ಸಕಾರಾತ್ಮಕ ಚಿಂತನೆಯು ನಿಮ್ಮ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಮಕ್ಕಳ ಅಧ್ಯಯನ ಪರೀಕ್ಷೆ ಮತ್ತು ಸ್ಪರ್ಧೆಗಳ ಬಗ್ಗೆ ಸಂಪೂರ್ಣ ಗಮನ ಕೊಡಿ. ನಿಮ್ಮ ಮುಂದಿನ ಕನಸುಗಳ ಬಗ್ಗೆ ಯಾರಿಗೂ ಹೇಳಬೇಡಿ. ಕಚೇರಿಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ವಿನೋದದಿಂದ ಸಮಯವನ್ನು ಕಳೆಯಬಹುದು,
ಈ ದಿನ ಯಾರಾದರೂ ನಿರ್ಗತಿಕರಿಗೆ ಸಹಾಯ ಮಾಡಿ.
*ಧನಸ್ಸು ರಾಶಿ.*
ಈ ದಿನ ನಿಮಗೆ ನಿಮ್ಮ ಸ್ನೇಹಿತರಿಂದ ಸಹಾಯ ಸಿಗಬಹುದ, ಗುರುಗಳ ದರ್ಶನ ಮತ್ತು ಅವರ ಮಾರ್ಗದರ್ಶನದಿಂದ ಮುಂದಿನ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯವಾಗಬಹುದು, ಕುಟುಂಬದಲ್ಲಿ ಜಗಳಗಳಾಗುವ ಸಂಭವವಿದೆ, ಈ ದಿನ ಕುಟುಂಬದ ವಾದ ವಿವಾದಗಳಿಗೆ ತಲೆಕೆಡಿಸಿಕೊಳ್ಳದೆ ಇರುವುದು ಒಳ್ಳೆಯದು, ಹಲ್ಲು ಮತ್ತು ಬಾಯಿಗೆ ಸಂಬಂಧಿಸಿದ ತೊಂದರೆಗಳಾಗಬಹುದು ವೈದ್ಯರ ಸಲಹೆ ಪಡೆಯಿರಿ, ಈ ದಿನ ಸಮಾಧಾನವಾಗಿ ಇರುವದರ ಜೊತೆಗೆ ಆರೋಗ್ಯದ ಕಡೆ ಗಮನ ಕೊಡಿ,
ಭಗವಾನ್ ಸೂರ್ಯನ ದೇವನ ಪ್ರಾರ್ಥನೆ ಮಾಡಿ.
*ಮಕರ ರಾಶಿ.*
ಈ ದಿನ ನಿಮಗೆ ಶುಭವಾಗಿದೆ ಹೊಸ ವಾಹನ ಮನೆ ಖರೀದಿಯ ವಿಚಾರವಾಗಿ ಎಲ್ಲವೂ ಸಕಾರಾತ್ಮಕವಾಗಿ ನಡೆಯಲಿವೆ, ಅಥವಾ ಮನೆಗೆ ಸಂಬಂದಿಸಿದ ವಸ್ತುಗಳನ್ನು ಖರೀದಿ ಮಾಡಬಹುದು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಜಾಗೃತ ವಹಿಸುವುದು ಉತ್ತಮ, ನಿಮ್ಮ ವಿರೋಧಿಗಳು ನಿಮ್ಮ ದಿಕ್ಕು ಬದಲಿಸುವ ಕೆಲಸ ಮಾಡಬಹುದು, ಆದರೆ ನೀವು ಸಹನೆಯಿಂದ ಆಲೋಚನೆ ಮಾಡಿ ನಿಮ್ಮ ವ್ಯವಹಾರವನ್ನು ಮಾಡಿ, ಹಣ ದುಂದು ವೆಚ್ಚವಾಗುವ ಸಂಭವವಿದೆ ಅನಾವಶ್ಯಕ ವೆಚ್ಚದ ಕಡೆ ಗಮನವಿರಿಸಿ,
ಈ ದಿನಗಣಪತಿಯ ಆರಾಧನೆ ಮಾಡಿ
*ಕುಂಭ ರಶಿ.*
ಇಂದು ನೀವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವಿರಿ, ಅನವಶ್ಯಕವಾಗಿ ಮಾತನಾಡುವುದರಿಂದ ಸಮಸ್ಯೆಗೆ ಸಿಲುಕುವಿರಿ, ಮಾತನಾಡುವಾಗ ನಕಾರಾತ್ಮಕ ಪದಗಳನ್ನು ಬಳಸಬೇಡಿ, ನಿಮ್ಮ ಮಕ್ಕಳ ಕಡೆ ಸ್ವಲ್ಪ ಕಾಳಜಿ ವಹಿಸಿ, ಕುಟುಂಬದ ಜೊತೆ ಸಮಯವನ್ನು ಕಲಿpಯುವುದು ಉತ್ತಮ, ವಿಮೆ ವೀಸಾ ಪಾಸ್ಪೋರ್ಟ್ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳಬಹುದು, ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಈ ದಿನ ಉತ್ತಮವಾಗಿದೆ,
ಹನುಮಾನ್ ಚಾಲೀಸ ಓದಿ.
*ಮೀನ ರಾಶಿ.*
ಈ ದಿನ ಯಾವುದೇ ಹಣಕಾಸಿನ ವ್ಯವಹಾರನ್ನು ಮಾಡಬೇಡಿ. ಸಾಲ ಕೊಡುವುದು ತರುವುದು ಬೇಡ. ನಿಮ್ಮ ಯಾವುದಾದರು ಒಂದು ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಹೆದರಾಗುವ ಸಾಧ್ಯತೆ ಇದೆ, ಶುಭ ಕಾರ್ಯಗಳು ಮತ್ತು ಧಾರ್ಮಿಕ ಕಾರ್ಯಗಳನ್ನು ಮುಂದೂಡುವದು ಉತ್ತಮ. ನೀವು ಪುರುಷರಾದರೆ ಸ್ತ್ರೀಯರಿಂದ, ಸ್ತ್ರೀಯರಾದರೆ ಪುರಷರಿಂದ ಈ ದಿನ ನಿಮಗೆ ಅನುಕೂಲವಾಗುವುದು,
ಲಲಿತಸಹಸ್ರನಾಮಪಠಣ ಮಾಡಿ ಶುಭವಾಗುವುದು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa