ವಿಜಯಪುರ ಮಹಾನಗರ ಪಾಲಿಕೆ ಕಸದ ವಾಹನ ಚಾಲಕರಿಂದ ಪ್ರತಿಭಟನೆ
ಕಾಯಂ
ಮಹಾನಗರ


ವಿಜಯಪುರ, 15 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರ ಹಾಗೂ ವಿಜಯಪುರ ಮಹಾನಗರ ಪಾಲಿಕೆ ವಿರುದ್ಧ ಕಸದ ವಾಹನ ಚಾಲಕರು ಸಿಡಿದೆದ್ದಿದ್ದಾರೆ. ವಿಜಯಪುರ ನಗರದ ಪಾಲಿಕೆಯ 35 ವಾರ್ಡ್‌‌ಗಳ ಕಸದ ವಾಹನ ಚಾಲಕರು, ಸಹಾಯಕರು ಕಾಯಂ ಉದ್ಯೋಗ ನೀಡಿ ಎಂದು ಪ್ರತಿಭಟನೆ ನಡೆಸಿದರು.

ಪಾಲಿಕೆಯ ಚಾಲಕರು, ಸಹಾಯಕರು ವಿಜಯಪುರ ನಗರದ ಮಹಾನಗರ ಪಾಲಿಕೆಯ ಕಚೇರಿ ಎದುರು ಧರಣಿ ನಡೆಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರ ಪಾಲಿಕೆಯ ಕಸದ ವಾಹನದ ಚಾಲಕರು, ಸಹಾಯಕರಿಗೆ ಕಾಯಂ ಉದ್ಯೋಗ ನೀಡುವುದಾಗಿ ಗ್ಯಾರಂಟಿ ನೀಡಿತ್ತು. ಆದರೆ ಇದುವರೆಗೂ ಯಾವುದೆ ಗ್ಯಾರಂಟಿಯ ಇಡೇರಿಸಿಲ್ಲ. ನಮಗೆ ಕಡಿಮೆ ಸಂಬಳ ಇದೆ. ಜೀವನ ನಡೆಸುವುದು ಹೇಗೆ? ಹೀಗಾಗಿ ನಮ್ಮ ಕೆಲಸಕ್ಕೆ ಭದ್ರತೆ ಬೇಕು. ಕಾಯಂ ಉದ್ಯೋಗದ ಆದೇಶ ಹೊರಡಿಸುವವರೆಗೂ ವಾಹನ ಚಲಾನೆ ಮಾಡಲ್ಲ ಎಂದು ಚಾಲಕರು ಪಟ್ಟು ಹಿಡಿದಿದ್ದರು, ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande