
ರಾಯ್‌ಪುರ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢ ಸರ್ಕಾರದ ಪ್ರಮುಖ ಮಹಿಳಾ ಕಲ್ಯಾಣ ಯೋಜನೆ ಮಹಾತಾರಿ ವಂದನ ಯೋಜನೆಯ 21ನೇ ಕಂತನ್ನು ಇಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ 69 ಲಕ್ಷಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ₹647.28 ಕೋಟಿ ವರ್ಗಾಯಿಸಲಾಗುತ್ತದೆ.
ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರು ಮಂಗಳವಾರ ತಡರಾತ್ರಿ ರಾಯ್‌ಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ರಾಜ್ಯಪಾಲ ರಾಮೆನ್ ದೇಕಾ ಮತ್ತು ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು.
ಈ ವೇಳೆ ವಿಧಾನ ಸಭಾ ಸ್ಪೀಕರ್ ಡಾ. ರಮಣ್ ಸಿಂಗ್, ಉಪಮುಖ್ಯಮಂತ್ರಿ ಅರುಣ್ ಸಾ, ಅರಣ್ಯ ಸಚಿವ ಕೇದಾರ್ ಕಶ್ಯಪ್, ಶಾಸಕ ಕಿರಣ್ ಸಿಂಗ್ ದೇವ್ ಸೇರಿದಂತೆ ಹಲವು ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಾತಾರಿ ವಂದನ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸುವುದನ್ನು ಉದ್ದೇಶವಾಗಿಟ್ಟುಕೊಂಡಿದ್ದು, ಇದರಡಿ ಫಲಾನುಭವಿ ಮಹಿಳೆಯರು ಪ್ರತಿ ತಿಂಗಳು ₹1,000 ಸಹಾಯಧನ ಪಡೆಯುತ್ತಾರೆ.
ಇಲ್ಲಿಯವರೆಗೆ 20 ಕಂತುಗಳ ಮೂಲಕ ಒಟ್ಟು ₹13,024.40 ಕೋಟಿ ಹಣ ವಿತರಿಸಲ್ಪಟ್ಟಿದ್ದು, ಇಂದು 21ನೇ ಕಂತಿನ ₹647.28 ಕೋಟಿ ಬಿಡುಗಡೆಗೊಂಡ ಬಳಿಕ ಒಟ್ಟು ಮೊತ್ತ ₹13,671.68 ಕೋಟಿಗೆ ಏರಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa