
ಹಾಂಗ್ ಕಾಂಗ್, 28 ನವೆಂಬರ್(ಹಿ.ಸ.):
ಆ್ಯಂಕರ್ : ಹಾಂಗ್ ಕಾಂಗನ ತೈ ಪೊದ ‘ವಾಂಗ್ ಫುಕ್ ಕೋರ್ಟ್’ ಪ್ರದೇಶದಲ್ಲಿರುವ ಎಂಟು ವಸತಿ ಗೋಪುರಗಳಲ್ಲಿ ಸಂಭವಿಸಿದ ಭೀಕರ ಬೆಂಕಿಯಲ್ಲಿ ಸಾವನಪ್ಪಿದವರ ಸಂಖ್ಯೆ 94 ಏರಿಕೆಯಾಗಿದ್ದು, 78 ಮಂದಿಯ ಸ್ಥಿತಿ ಗಂಭೀರವಾಗಿದೆ.
ನಾಲ್ಕು ಕಟ್ಟಡಗಳ ಬೆಂಕಿ ನಂದಿಸಲಾದರೂ, ಮೂರರಲ್ಲಿ ಶೋಧ–ರಕ್ಷಣಾ ಕಾರ್ಯ ರಾತ್ರಿಯಿಡೀ ಮುಂದುವರಿದಿದೆ. ಇಂದು ಬೆಳಿಗ್ಗೆ ಎರಡು ಸೇರಿದಂತೆ ಐದು ಶವಗಳು ಪತ್ತೆಯಾಗಿವೆ.
ಬೆಂಕಿ ಮರುಭುಗಿಲೆದ್ದದ್ದರಿಂದ ರಕ್ಷಣಾ ಕಾರ್ಯ ಅಡ್ಡಿಯಾಗಿತ್ತು. ಸುಮಾರು 2,000 ಫ್ಲಾಟ್‌ಗಳಿರುವ ಈ ಗೋಪುರಗಳಲ್ಲಿ ಅನೇಕರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿ ನಿರ್ಮಾಣ ಕಂಪನಿಯ ಮೂವರು ಅಧಿಕಾರಿಗಳು, ಇಬ್ಬರು ನಿರ್ದೇಶಕರು, ಒಬ್ಬ ಸಲಹಾ ಎಂಜಿನಿಯರ್ ನರಹತ್ಯೆ ಆರೋಪದ ಮೇಲೆ ಬಂಧಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa