ಪಶ್ಚಿಮ ಬಂಗಾಳ–ಈಶಾನ್ಯದಲ್ಲಿ ಪ್ರಬಲ ಭೂಕಂಪ
ಕೋಲ್ಕತ್ತಾ, 21 ನವೆಂಬರ್ (ಹಿ.ಸ.) : ಆ್ಯಂಕರ್ : ಇಂದು ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಭಾರತದಲ್ಲಿ ಬಲವಾದ ಭೂಕಂಪ ಸಂಭವಿಸಿದೆ, ಭಯಭೀತರಾದ ಜನರು ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಬಂದ ಘಟನೆಗಳು ಅನೇಕ ಕಡೆಗಳಲ್ಲಿ ಕಂಡು ಬಂದಿವೆ. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ತೀವ
Earthquake


ಕೋಲ್ಕತ್ತಾ, 21 ನವೆಂಬರ್ (ಹಿ.ಸ.) :

ಆ್ಯಂಕರ್ : ಇಂದು ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಭಾರತದಲ್ಲಿ ಬಲವಾದ ಭೂಕಂಪ ಸಂಭವಿಸಿದೆ, ಭಯಭೀತರಾದ ಜನರು ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಬಂದ ಘಟನೆಗಳು ಅನೇಕ ಕಡೆಗಳಲ್ಲಿ ಕಂಡು ಬಂದಿವೆ.

ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆ 5.7 ಆಗಿದ್ದು, ಬಾಂಗ್ಲಾದೇಶದ ನರಸಿಂಗ್ಡಿ ಪಟ್ಟಣದ ದಕ್ಷಿಣ–ನೈಋತ್ಯಕ್ಕೆ 13 ಕಿ.ಮೀ ದೂರದಲ್ಲಿ ಕೇಂದ್ರಬಿಂದು ದಾಖಲಾಗಿದೆ. ಬೆಳಿಗ್ಗೆ 10.08 ಗಂಟೆಗೆ ಸಂಭವಿಸಿದ ಈ ಕಂಪನದ ಆಳ ಸುಮಾರು 10 ಕಿಲೋಮೀಟರ್ ಆಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಭೂಕಂಪದ ಕ್ಷಣಗಳ ಅನೇಕ ವೀಡಿಯೊಗಳು ಹರಿದಾಡಿದ್ದು, ಮನೆಗಳಲ್ಲಿನ ಫ್ಯಾನ್‌ಗಳು ನಡುಗುತ್ತಿರುವ ದೃಶ್ಯಗಳು, ರಸ್ತೆಗೆ ಓಡಿಬರುತ್ತಿರುವ ಜನಸಮೂಹದ ಚಿತ್ರಣಗಳು ವ್ಯಾಪಕವಾಗಿ ಹಂಚಲ್ಪಟ್ಟಿವೆ. ಕೆಲವೆಡೆ ಕಚೇರಿ–ಅಪಾರ್ಟ್‌ಮೆಂಟ್ ಸಂಕೀರ್ಣಗಳನ್ನು ಸ್ಥಳಾಂತರಿಸುವ ದೃಶ್ಯಗಳೂ ಕಂಡು ಬಂದಿವೆ.

ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಗುವಾಹಟಿ ಪ್ರದೇಶಗಳಲ್ಲಿಯೂ ಭೂಕಂಪದ ಸ್ಪಷ್ಟ ಪ್ರಭಾವ ಕಂಡುಬಂದಿದ್ದು, ಜನರು ಕಟ್ಟಡಗಳಿಂದ ಹೊರಗೆ ಧಾವಿಸಿದ್ದು ವರದಿಯಾಗಿದೆ.

ಅಧಿಕಾರಿಗಳ ಪ್ರಕಾರ, ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿ ನಾಶದ ವರದಿಗಳು ಇನ್ನೂ ಬಂದಿಲ್ಲ. ಆದಾಗ್ಯೂ, ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande