ನಕ್ಸಲ್ ನಾಯಕ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್‌ಜಿ, ಭದ್ರತಾ ಪಡೆಗಳ ಗುಂಡಿಗೆ ಬಲಿ
ವಿಜಯವಾಡ, 19 ನವೆಂಬರ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ಬಸ್ತಾರ್‌ನಲ್ಲಿ 131 ಭದ್ರತಾ ಸಿಬ್ಬಂದಿಯನ್ನು ಕೊಂದ ಆರೋಪಿ ಮಾವೋವಾದಿ ನಕ್ಸಲೈಟ್ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್‌ಜಿ ಇಂದು ಆಂಧ್ರ ಪ್ರದೇಶದ ರಂಪಚೋಡವರಂ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಆಂ
Naxal death


ವಿಜಯವಾಡ, 19 ನವೆಂಬರ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ಬಸ್ತಾರ್‌ನಲ್ಲಿ 131 ಭದ್ರತಾ ಸಿಬ್ಬಂದಿಯನ್ನು ಕೊಂದ ಆರೋಪಿ ಮಾವೋವಾದಿ ನಕ್ಸಲೈಟ್ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್‌ಜಿ ಇಂದು ಆಂಧ್ರ ಪ್ರದೇಶದ ರಂಪಚೋಡವರಂ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಆಂಧ್ರ ಪ್ರದೇಶ ಗುಪ್ತಚರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮಹೇಶ್ ಚಂದ್ರ ಲಡ್ಡಾ ದೃಢಪಡಿಸಿದ್ದಾರೆ.

ಇಂದು ಬೆಳಗಿನ ಜಾವ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವಿನ ಭೀಕರ ಗುಂಡಿನ ಚಕಮಕಿಯಲ್ಲಿ ಆರರಿಂದ ಏಳು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಎಡಿಜಿ ಮಹೇಶ್ ಚಂದ್ರ ತಿಳಿಸಿದ್ದಾರೆ. ಮೃತ ನಕ್ಸಲರಲ್ಲಿ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್ಜಿ ಕೂಡ ಸೇರಿದ್ದಾನೆ.

ದೇವ್ಜಿ ಒಡಿಶಾ-ಆಂಧ್ರಪ್ರದೇಶದ ಗಡಿಯಲ್ಲಿ ಸಕ್ರಿಯನಾಗಿದ್ದ. ಇತ್ತಿಚೆಗೆ ನಕ್ಸಲೈಟ್ ಸಂಘಟನೆಯು ದೇವ್ಜಿಯನ್ನು ತನ್ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿತ್ತು. ಬಸ್ತಾರ್ ಪ್ರದೇಶದಲ್ಲಿ 131 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಕೊಂದ ಆರೋಪ ದೇವ್ಜಿ ಮೇಲಿದೆ. ಈ ಭಯಾನಕ ನಕ್ಸಲೈಟ್‌ನ ಬಂಧನಕ್ಕೆ ಸರ್ಕಾರ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande