ಮೆಕ್ಕೆಜೋಳಕ್ಕೆ ₹2,400 ಬೆಂಬಲ ಬೆಲೆ : ರಕ್ತದಲ್ಲಿ ಮುಖ್ಯಮಂತ್ರಿ ಗೆ ಪತ್ರ
ಗದಗ, 18 ನವೆಂಬರ್ (ಹಿ.ಸ.) : ಆ್ಯಂಕರ್ : ಮೆಕ್ಕೆಜೋಳ ಬೆಲೆಯ ಗಂಭೀರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸದಿರುವ ಹಿನ್ನೆಲೆಯಲ್ಲಿ, ಗದಗ ಜಿಲ್ಲೆಯ ಪ್ರಕಾಶ ಕಲ್ಯಾಣಿ ಎಂಬ ರೈತ ತನ್ನ ರಕ್ತದಲ್ಲಿ ಪತ್ರ ಬರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಮೆಕ್ಕೆಜೋಳ
ಫೋಟೋ


ಫೋಟೋ


ಗದಗ, 18 ನವೆಂಬರ್ (ಹಿ.ಸ.) :

ಆ್ಯಂಕರ್ : ಮೆಕ್ಕೆಜೋಳ ಬೆಲೆಯ ಗಂಭೀರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸದಿರುವ ಹಿನ್ನೆಲೆಯಲ್ಲಿ, ಗದಗ ಜಿಲ್ಲೆಯ ಪ್ರಕಾಶ ಕಲ್ಯಾಣಿ ಎಂಬ ರೈತ ತನ್ನ ರಕ್ತದಲ್ಲಿ ಪತ್ರ ಬರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ಮೆಕ್ಕೆಜೋಳಕ್ಕೆ ₹2,400 ಬೆಂಬಲ ಬೆಲೆ ಘೋಷಿಸಿದ್ದರೂ, ರಾಜ್ಯ ಸರ್ಕಾರ ಇನ್ನೂ ಖರೀದಿ ಕೇಂದ್ರಗಳನ್ನು ಆರಂಭಿಸದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಬೆಳೆ ಹೊಲಗಳಲ್ಲಿ ರಾಶಿಯಾಗಿದ್ದರೂ ಯೋಗ್ಯ ದರ ಸಿಗದೆ, ಸಾಲದ ಬಾಧೆಯಲ್ಲಿ ನರಳುತ್ತಿರುವ ರೈತರು ಸಂಕಟದಲ್ಲಿ ಪರದಾಡುತ್ತಿದ್ದಾರೆ.

ಈ ನಡುವೆ ಪ್ರಕಾಶ ಕಲ್ಯಾಣಿ, ತೀವ್ರ ಬೇಸರಗೊಂಡು, ತನ್ನ ರಕ್ತದಿಂದಲೇ ಪತ್ರ ಬರೆದು “ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತಕ್ಷಣ ಆರಂಭಿಸಿ, ಕೇಂದ್ರ ಘೋಷಿಸಿರುವ ಬೆಂಬಲ ದರವನ್ನು ಜಾರಿಗೊಳಿಸಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ರಕ್ತದಲ್ಲಿ ಬರೆಯುವ ಮೂಲಕ ಮನವಿಯನ್ನು ಸಲ್ಲಿಸುವಂತಹ ತೀವ್ರ ನಿರ್ಧಾರಕ್ಕೆ ರೈತ ಬಿದ್ದಿರುವುದು ಗ್ರಾಮೀಣ ಪ್ರದೇಶದಲ್ಲಿ ಆಘಾತ ಸೃಷ್ಟಿಸಿದೆ. ತಮ್ಮ ಮನವಿಯನ್ನು ಶಿರಹಟ್ಟಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದಾರೆ.

ಸ್ಥಳೀಯ ರೈತರು ಪ್ರಕಾಶ ಕಲ್ಯಾಣಿಯ ಕ್ರಮಕ್ಕೆ ಬೆಂಬಲ ನೀಡಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಂಡು ಖರೀದಿ ಕೇಂದ್ರಗಳನ್ನು ತೆರೆದು ರೈತರನ್ನು ಸಂಕಷ್ಟದಿಂದ ರೂರು ಮಾಡುವಂತೆ ಆಗ್ರಹಿಸಿದ್ದಾರೆ.

ರೈತರ ಬೇಡಿಕೆಗಳನ್ನು ಗಮನಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಸ್ಪಂದಿಸುವರಾ ಎಂಬುದು ಈಗ ಎಲ್ಲರ ಗಮನ ಸೆಳೆದಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande